Tuesday, 31 December 2013

Happy New Year 2014




Let us gather and celebrated Happy New Year,
Beginning of a brand New Year,
May is brings prosperity and happiness,
And love in your life
Wishing you Happy New Year



2014




Saturday, 23 November 2013

HAPPY BIRTHDAY TO RAMKASHYAP







HAPPY BIRTHDAY TO  RAM KASHYAP





Smiles and laughter, joy and cheer


New happiness that stays throughout the year

Hope your birthday brings all these and more
Filling life with surprise and joys galore!


Friday, 18 January 2013

ಪ್ರೇಮಾಮೃತ -------------13






                               ಪ್ರೇಮಾಮೃತ -------------13

ತನಗೆ ಬಂದ ಪ್ರಶಸ್ತಿಯನ್ನು ತೆಗೆದುಕೊಂಡ ಲಕ್ಷ್ಮಿಯು ಸ್ಟೇಜ್ ಮೇಲೆ ನಿಂತು ನಗುನಗುತ್ತಾ ತನಗೆ ಬಂದ ಈ ಪ್ರಶಸ್ತಿಗೆ ಕಾರಣ ತಮ್ಮ ಕಾಲೇಜಿನಲ್ಲಿ ಬಹಳ ದೊಡ್ಡ ಪ್ರೊಫೆಸರ್ಆಗಿರುವ ಡಾ.ದೀಪಕ್ ರಾಜ್ ಸರ್ ಎಂದು ಹೇಳುವಾಗ ಕಣ್ಣಿನಲ್ಲಿ ಆನಂದ ಭಾಷ್ಪ ಉಂಟಾಗುತ್ತದೆ . ನಂತರ ಅವಳು ಸರ್ ಜೊತೆ ನನಗೊಂದು ಫೋಟೋ ಎಂದು ಕೇಳಿ  ಫೋಟೋ ತೆಗೆಸಿಕೊಳ್ಳುತ್ತಾಳೆ .ಎಲ್ಲಾರೂ ಮನೆಗೆ ಹೊರಡುತ್ತಾರೆ. ಸರ್ ನಾನು ಆಟೋದಲ್ಲಿ ಹೋಗುತ್ತೀನಿ ಎಂದು ತನ್ನ ಕೈಯಲ್ಲಿ ಹಿಡಿದ ಪ್ರಶಸ್ತಿಗಳನ್ನು ನೋಡಿದ ದೀಪಕ್ ಈತರಹ ಅಂತ ಗೊತ್ತಿದ್ದರೆ ಒಂದು ಗೋಣಿಚೀಲ ತರಬಹುದಿತ್ತು ಎಂದು ನಕ್ಕು ಹೋಗಿ ಕಾರಿನಲ್ಲಿ ಕುಳಿತುಕೋ ಎಂದು ಗಂಭೀರವಾಗಿ ಹೇಳುತ್ತಾ  ಕಾರಿನ ಕೀ ಕೊಡುತ್ತಾನೆ.ತಾನು ಬೇರೆ ಕಾಲೇಜಿನಿಂದ ಬಂದಿದ್ದ ಪ್ರೋಫೆಸ್ಸರ್ಸ್ ಜೊತೆ ಮಾತನಾಡುತ್ತಿರುತ್ತಾನೆ . ಲಕ್ಷ್ಮಿಯು ಕಾರಿನ ಬಾಗಿಲು ತೆಗೆಯಲಾಗದೆ ಒದ್ದಾಡುತ್ತಿರುವುದನ್ನು ನೋಡಿ ಎಲ್ಲಾರಿಗೂ ಬಯ್  ಹೇಳಿ ಬಂದು ಕಾರಿನ ಬಾಗಿಲು ತೆಗೆದು ತಾನೂ ಕುಳಿತು ಹೊರಡುತ್ತಾನೆ. ಕಾರಿಗೆ ಪೆಟ್ರೋಲ್ ಹಾಕಿಸಲೆಂದು ಅಲ್ಲೇ ಹತ್ತಿರವಿದ್ದ ಪೆಟ್ರೋಲ್ ಬಂಕ್ ಹತ್ತಿರ ಕಾರ್  ನಿಲ್ಲಿಸಿ ಪೆಟ್ರೋಲ್ ಹಾಕಿಸಿ ಹಣ ಕೊಟ್ಟು ಬಂದಾಗ ನೋಡಿದರೆ ಕಾರಿನಲ್ಲಿ ಲಕ್ಷ್ಮಿಯು ಕಾಣುವುದಿಲ್ಲ .
                                                          ಮುಂದುವರಿಯುವುದು --------- 

Happy Birth day to Navya shree




Happy Birth day to Navya shree




Saturday, 12 January 2013

ಸಂಕ್ರಾಂತಿ ಹಬ್ಬದ ಶುಭಾಶಯಗಳು










ಸಂಕ್ರಾಂತಿ ಹಬ್ಬದ ಶುಭಾಶಯಗಳು 








ಪ್ರೇಮಾಮೃತ--------12









     ಪ್ರೇಮಾಮೃತ--------12

ಜನಪದ ಗೀತೆಯ ನಂತರ ಭಾವಗೀತೆ, ಚಲನಚಿತ್ರಗೀತೆ, ಅಂತ್ಯಾಕ್ಷರಿ ಕಾರ್ಯಕ್ರಮಗಳು ನಡೆಯುತ್ತವೆ . ಎಲ್ಲಾ ಸ್ಪರ್ಧೆಗಳಲ್ಲೂ ಲಕ್ಷ್ಮಿಯು ಬಹಳ ಅದ್ಭುತವಾಗಿ ಸ್ಪರ್ಧಿಸಿರುತ್ತಾಳೆ .  ದೀಪಕ್ ಪ್ರೊಫೆಸರ್ ಲಕ್ಷ್ಮಿಗೆ ಇನ್ನು ತಾವು ನೃತ್ಯವನ್ನು ಮಾಡಬಹುದು ಎಂದು ತುಂಟನಗೆಬೀರುತ್ತಾನೆ . ಆಯಿತೆಂದು ಲಕ್ಷ್ಮಿಯು ಒಪ್ಪಿ ಡ್ಯಾನ್ಸ್ ಡ್ರೆಸ್ ಧರಿಸಿ ತಯಾರಾಗುತ್ತಿರುತ್ತಾಳೆ.  ಒಮ್ಮೆ ನೋಡೋಣವೆಂದು ಬಂದ ದೀಪಕ್ ಲಕ್ಷ್ಮಿಯನ್ನು ನೋಡಿ ಬಹಳ ಸಂತೋಷ    ಪಡುತ್ತಾನೆ.  ಅಲ್ಲ ಕಣೋ ಪುಟ್ಟು , ನೀನೇ ಇಷ್ಟು ಒಳ್ಳೆ ಬಣ್ಣದಿಂದ ಮುದ್ದು ಮುದ್ದಾಗಿದ್ದೀಯ ಅಂದಮೇಲೆ ನಿಂಗೆ ಯಾಕೆ ಇಷ್ಟೊಂದು ಮೇಕಪ್ ಎಂದು ಮುದ್ದಿನಿಂದ ತನ್ನ ಕರವಸ್ತ್ರದಿಂದ ಅವಳ ಕೆನ್ನೆಯನ್ನು ಒರಸುತ್ತಾನೆ ಮತ್ತು   ಆಲ್ ದಿ ಬೆಸ್ಟ್ ಎಂದು ನಕ್ಕು ಹೊರಡುತ್ತಾನೆ. ಲಕ್ಷ್ಮಿಯು ಮಾಡಿದ " ಕೃಷ್ಣ ನೀ ಬೇಗನೆ ಬಾರೋ"  ಎಂದು ಕುಣಿದು ಕುಪ್ಪಳಿಸಿ ಮಾಡಿದ ಡ್ಯಾನ್ಸ್ ಬಹಳ ಆಕರ್ಷಕವಾಗಿರುತ್ತದೆ. ಕಡೆಗೆ ಕಾರ್ಯಕ್ರಮದ ವಿಜಯಿತರಿಗೆ ಬಹುಮಾನ ವಿತರಣೆಯಾಗಲಿದೆ ಎಂದು ಘೋಷಿಸಿ ,ಬಹುಮಾನ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾರೆ .ಎಲ್ಲ ಸ್ಪರ್ಧೆಗಳಲ್ಲೂ ಲಕ್ಷ್ಮಿಗೆ ಮೊದಲನೆಯ ಬಹುಮಾನ ಮತ್ತು ಆಕರ್ಷಕ ಬಹುಮಾನಗಳು ಬಂದಿರುತ್ತದೆ. ಒಂದೇ ಒಂದರಲ್ಲಿ ಮಾತ್ರ ಎರಡನೆಯ ಬಹುಮಾನ ಬಂದಿರುತ್ತದೆ. ಅವಳಿಗೆ ಸ್ಟಾರ್ ಆಫ್ ದಿ ಇಯರ್ ಎಂಬ ಪ್ರಶಸ್ತಿಯು ಬಂದೊಡನೆ ಬಿದ್ದ ಚಪ್ಪಾಳೆ ಅಷ್ಟಿಷ್ಟಲ್ಲ .
                                                             ಮುಂದುವರಿಯುವುದು --------

ಸಂಕ್ರಾಂತಿ ಹಬ್ಬದ ಶುಭಾಶಯಗಳು



 ಸಂಕ್ರಾಂತಿ ಹಬ್ಬದ ಶುಭಾಶಯಗಳು  




Friday, 4 January 2013

ಪ್ರೇಮಾಮೃತ -----------11

                             


                         
                                   ಪ್ರೇಮಾಮೃತ -----------11

ಎರಡು ನಿಮಿಷದಲ್ಲೇ ಕಾರ್ಯಕ್ರಮವು ಶುರುವಾಗುತ್ತದೆ.  ಮೊಟ್ಟ  ಮೊದಲನೆಯದಾಗಿ ದೇವರ ನಾಮದ ಸ್ಪರ್ಧೆಯು ನಡೆಯಲಿದೆ ಎಂದು ಘೋಷಿಸುತ್ತ , ಮೊದಲನೆಯ ಸ್ಪರ್ಧಿ ಕುಮಾರಿ ಲಕ್ಷ್ಮಿಶ್ರೀವತ್ಸ  , ಜ್ಞಾನಾಮೃತ  ಕಾಲೇಜಿನಿಂದ ಎಂದೊಡನೆ ,ಆಗತಾನೆ ಬಂದಿದ್ದ ಲಕ್ಷ್ಮಿಗೆ ಸ್ವಲ್ಪ ಗಾಬರಿಯಾಗುತ್ತದೆ . ಆದರೂ ಸ್ವಲ್ಪ ಭಯದಿಂದ ವೇದಿಕೆಗೆ ನಗುನಗುತ್ತ ಬಂದು ,ಎಲ್ಲರಿಗೂ ಕೈ ಮುಗಿದು  ನಮಸ್ಕಾರ , ನಾನು ಲಕ್ಷ್ಮಿ ಶ್ರೀವತ್ಸ ,ಜ್ಞಾ ನಾಮೃತ ಕಾಲೇಜಿನಿಂದ ಬಂದಿದ್ದೇನೆ ಎಂದೊಡನೆ  ಅವಳ ಗುಳಿಬಿದ್ದ ಕೆನ್ನೆ ಹಾಗೂ ಸುಂದರತೆಗೆ ಎಲ್ಲಾರೂ ಮೆಚ್ಚು ತ್ತಾರೆ. ಅವಳು ವಾತಾಪಿ ಗಣಪತಿಂ ಭಜೆ ಎಂದು ಸಣ್ಣ  ದ್ವನಿಯಲ್ಲಿ  ಶುರು ಮಾಡಿದೊಡನೆ ಎಲ್ಲರೂ ಬೆರಗಾಗುತ್ತಾರೆ .  ಅವಳು ಹಾಡುವಾಗ ಅವಳ ಎದುರಿಗೆ ತೀರ್ಪುಗಾರರು ಕುಳಿತಿದ್ದ ಕಡೆ ಪ್ರೊಫೆಸರ್ ದೀಪಕ್ ರಾಜ್ ಕೂಡ ಒಬ್ಬರಾಗಿರುತ್ತಾರೆ . ಅದನ್ನು ಗಮನಿಸಿದ ಲಕ್ಷ್ಮಿಯು ಓ  ಸರ್ ಬೇರೆ ಇದ್ದಾರೆ ಎಂದು ಸ್ವಲ್ಪ ಕಸಿವಿಸಿ ಗೊಳ್ಳು ತ್ತಾಳೆ.  ದೇವರನಾಮದ  ಕಾರ್ಯಕ್ರಮಕ್ಕೆ ಸುಮಾರು ನೂರು \ಸ್ಪರ್ಧಿ ಗಳು ಭಾಗವಹಿಸಿರುತ್ತಾರೆ. ಸುಮಾರು ಎರಡು ಘಂಟೆಯ ಕಾಲ ತೆಗೆದು ಕೊಂಡಿರುತ್ತದೆ. ನಂತರ  ಜನಪದ ಗೀತೆ ಕಾರ್ಯಕ್ರಮವು ಶುರುವಾಗುತ್ತದೆ. ಅಲ್ಲಿ ಲಕ್ಷ್ಮಿಯು ಮತ್ತೆ ಮೊದಲನೆಯ ಸ್ಪರ್ಧಿಯಾಗಿರುತ್ತಾಳೆ. "ಕಟ್ದೊರೆಲ್ಲ  ಕವಿಗಳಲ್ಲ ಹುಟ್ದೊರೆಲ್ಲ ಭುವಿಗಳಲ್ಲ ಮುಟ್ಟಿ ದ್ದೆಲ್ಲ ಚಿನ್ನ ಅಂತ ತಿಳ್ಕೊಬ್ಯಾಡ  ಡಕ್ ಣಕ್  ಡಕ್ ಣಕ್   " ಎಂದು ದಪ್ಪ ದ್ವನಿ ಅಂದರೆ ಗಂಡಸರ ದ್ವನಿಯಲ್ಲಿ ಹಾಡಲು   ಶುರು ಮಾಡಿದೊಡನೆ ಚಪ್ಪಾಳೆ ಬಿದ್ದಿದ್ದಶ್ಷ್ಟಿಷ್ಟಲ್ಲ .ತೀರ್ಪು ಗಾರರುಗಳು ಕೂಡ ಒಂದು ನಿಮಿಷ ಆಶ್ಚರ್ಯ ಪಡುತ್ತಾರೆ .  ದೀಪಕ್ ಗಂತೂ ಆದ ಖುಷಿ ಹೇಳತೀರದು .

                                                        ಮುಂದುವರಿಯುವುದು --------