ಪ್ರೇಮಾಮೃತ--------12
ಜನಪದ ಗೀತೆಯ ನಂತರ ಭಾವಗೀತೆ, ಚಲನಚಿತ್ರಗೀತೆ, ಅಂತ್ಯಾಕ್ಷರಿ ಕಾರ್ಯಕ್ರಮಗಳು ನಡೆಯುತ್ತವೆ . ಎಲ್ಲಾ ಸ್ಪರ್ಧೆಗಳಲ್ಲೂ ಲಕ್ಷ್ಮಿಯು ಬಹಳ ಅದ್ಭುತವಾಗಿ ಸ್ಪರ್ಧಿಸಿರುತ್ತಾಳೆ . ದೀಪಕ್ ಪ್ರೊಫೆಸರ್ ಲಕ್ಷ್ಮಿಗೆ ಇನ್ನು ತಾವು ನೃತ್ಯವನ್ನು ಮಾಡಬಹುದು ಎಂದು ತುಂಟನಗೆಬೀರುತ್ತಾನೆ . ಆಯಿತೆಂದು ಲಕ್ಷ್ಮಿಯು ಒಪ್ಪಿ ಡ್ಯಾನ್ಸ್ ಡ್ರೆಸ್ ಧರಿಸಿ ತಯಾರಾಗುತ್ತಿರುತ್ತಾಳೆ. ಒಮ್ಮೆ ನೋಡೋಣವೆಂದು ಬಂದ ದೀಪಕ್ ಲಕ್ಷ್ಮಿಯನ್ನು ನೋಡಿ ಬಹಳ ಸಂತೋಷ ಪಡುತ್ತಾನೆ. ಅಲ್ಲ ಕಣೋ ಪುಟ್ಟು , ನೀನೇ ಇಷ್ಟು ಒಳ್ಳೆ ಬಣ್ಣದಿಂದ ಮುದ್ದು ಮುದ್ದಾಗಿದ್ದೀಯ ಅಂದಮೇಲೆ ನಿಂಗೆ ಯಾಕೆ ಇಷ್ಟೊಂದು ಮೇಕಪ್ ಎಂದು ಮುದ್ದಿನಿಂದ ತನ್ನ ಕರವಸ್ತ್ರದಿಂದ ಅವಳ ಕೆನ್ನೆಯನ್ನು ಒರಸುತ್ತಾನೆ ಮತ್ತು ಆಲ್ ದಿ ಬೆಸ್ಟ್ ಎಂದು ನಕ್ಕು ಹೊರಡುತ್ತಾನೆ. ಲಕ್ಷ್ಮಿಯು ಮಾಡಿದ " ಕೃಷ್ಣ ನೀ ಬೇಗನೆ ಬಾರೋ" ಎಂದು ಕುಣಿದು ಕುಪ್ಪಳಿಸಿ ಮಾಡಿದ ಡ್ಯಾನ್ಸ್ ಬಹಳ ಆಕರ್ಷಕವಾಗಿರುತ್ತದೆ. ಕಡೆಗೆ ಕಾರ್ಯಕ್ರಮದ ವಿಜಯಿತರಿಗೆ ಬಹುಮಾನ ವಿತರಣೆಯಾಗಲಿದೆ ಎಂದು ಘೋಷಿಸಿ ,ಬಹುಮಾನ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾರೆ .ಎಲ್ಲ ಸ್ಪರ್ಧೆಗಳಲ್ಲೂ ಲಕ್ಷ್ಮಿಗೆ ಮೊದಲನೆಯ ಬಹುಮಾನ ಮತ್ತು ಆಕರ್ಷಕ ಬಹುಮಾನಗಳು ಬಂದಿರುತ್ತದೆ. ಒಂದೇ ಒಂದರಲ್ಲಿ ಮಾತ್ರ ಎರಡನೆಯ ಬಹುಮಾನ ಬಂದಿರುತ್ತದೆ. ಅವಳಿಗೆ ಸ್ಟಾರ್ ಆಫ್ ದಿ ಇಯರ್ ಎಂಬ ಪ್ರಶಸ್ತಿಯು ಬಂದೊಡನೆ ಬಿದ್ದ ಚಪ್ಪಾಳೆ ಅಷ್ಟಿಷ್ಟಲ್ಲ .
ಮುಂದುವರಿಯುವುದು --------
No comments:
Post a Comment