Friday, 4 January 2013

ಪ್ರೇಮಾಮೃತ -----------11

                             


                         
                                   ಪ್ರೇಮಾಮೃತ -----------11

ಎರಡು ನಿಮಿಷದಲ್ಲೇ ಕಾರ್ಯಕ್ರಮವು ಶುರುವಾಗುತ್ತದೆ.  ಮೊಟ್ಟ  ಮೊದಲನೆಯದಾಗಿ ದೇವರ ನಾಮದ ಸ್ಪರ್ಧೆಯು ನಡೆಯಲಿದೆ ಎಂದು ಘೋಷಿಸುತ್ತ , ಮೊದಲನೆಯ ಸ್ಪರ್ಧಿ ಕುಮಾರಿ ಲಕ್ಷ್ಮಿಶ್ರೀವತ್ಸ  , ಜ್ಞಾನಾಮೃತ  ಕಾಲೇಜಿನಿಂದ ಎಂದೊಡನೆ ,ಆಗತಾನೆ ಬಂದಿದ್ದ ಲಕ್ಷ್ಮಿಗೆ ಸ್ವಲ್ಪ ಗಾಬರಿಯಾಗುತ್ತದೆ . ಆದರೂ ಸ್ವಲ್ಪ ಭಯದಿಂದ ವೇದಿಕೆಗೆ ನಗುನಗುತ್ತ ಬಂದು ,ಎಲ್ಲರಿಗೂ ಕೈ ಮುಗಿದು  ನಮಸ್ಕಾರ , ನಾನು ಲಕ್ಷ್ಮಿ ಶ್ರೀವತ್ಸ ,ಜ್ಞಾ ನಾಮೃತ ಕಾಲೇಜಿನಿಂದ ಬಂದಿದ್ದೇನೆ ಎಂದೊಡನೆ  ಅವಳ ಗುಳಿಬಿದ್ದ ಕೆನ್ನೆ ಹಾಗೂ ಸುಂದರತೆಗೆ ಎಲ್ಲಾರೂ ಮೆಚ್ಚು ತ್ತಾರೆ. ಅವಳು ವಾತಾಪಿ ಗಣಪತಿಂ ಭಜೆ ಎಂದು ಸಣ್ಣ  ದ್ವನಿಯಲ್ಲಿ  ಶುರು ಮಾಡಿದೊಡನೆ ಎಲ್ಲರೂ ಬೆರಗಾಗುತ್ತಾರೆ .  ಅವಳು ಹಾಡುವಾಗ ಅವಳ ಎದುರಿಗೆ ತೀರ್ಪುಗಾರರು ಕುಳಿತಿದ್ದ ಕಡೆ ಪ್ರೊಫೆಸರ್ ದೀಪಕ್ ರಾಜ್ ಕೂಡ ಒಬ್ಬರಾಗಿರುತ್ತಾರೆ . ಅದನ್ನು ಗಮನಿಸಿದ ಲಕ್ಷ್ಮಿಯು ಓ  ಸರ್ ಬೇರೆ ಇದ್ದಾರೆ ಎಂದು ಸ್ವಲ್ಪ ಕಸಿವಿಸಿ ಗೊಳ್ಳು ತ್ತಾಳೆ.  ದೇವರನಾಮದ  ಕಾರ್ಯಕ್ರಮಕ್ಕೆ ಸುಮಾರು ನೂರು \ಸ್ಪರ್ಧಿ ಗಳು ಭಾಗವಹಿಸಿರುತ್ತಾರೆ. ಸುಮಾರು ಎರಡು ಘಂಟೆಯ ಕಾಲ ತೆಗೆದು ಕೊಂಡಿರುತ್ತದೆ. ನಂತರ  ಜನಪದ ಗೀತೆ ಕಾರ್ಯಕ್ರಮವು ಶುರುವಾಗುತ್ತದೆ. ಅಲ್ಲಿ ಲಕ್ಷ್ಮಿಯು ಮತ್ತೆ ಮೊದಲನೆಯ ಸ್ಪರ್ಧಿಯಾಗಿರುತ್ತಾಳೆ. "ಕಟ್ದೊರೆಲ್ಲ  ಕವಿಗಳಲ್ಲ ಹುಟ್ದೊರೆಲ್ಲ ಭುವಿಗಳಲ್ಲ ಮುಟ್ಟಿ ದ್ದೆಲ್ಲ ಚಿನ್ನ ಅಂತ ತಿಳ್ಕೊಬ್ಯಾಡ  ಡಕ್ ಣಕ್  ಡಕ್ ಣಕ್   " ಎಂದು ದಪ್ಪ ದ್ವನಿ ಅಂದರೆ ಗಂಡಸರ ದ್ವನಿಯಲ್ಲಿ ಹಾಡಲು   ಶುರು ಮಾಡಿದೊಡನೆ ಚಪ್ಪಾಳೆ ಬಿದ್ದಿದ್ದಶ್ಷ್ಟಿಷ್ಟಲ್ಲ .ತೀರ್ಪು ಗಾರರುಗಳು ಕೂಡ ಒಂದು ನಿಮಿಷ ಆಶ್ಚರ್ಯ ಪಡುತ್ತಾರೆ .  ದೀಪಕ್ ಗಂತೂ ಆದ ಖುಷಿ ಹೇಳತೀರದು .

                                                        ಮುಂದುವರಿಯುವುದು --------

No comments:

Post a Comment