ಪ್ರೇಮಾಮೃತ
ಈ ಕಾದಂಬರಿಯನ್ನು ಬರೆದಿರುವವರು ಕಥಾ ಲೇಖಖಿ ಶ್ರೀಮತಿ ಹಾ ರಾ ಲತ .
ಲೇಖಖಿ ಪರಿಚಯ
ದಿ ಜಮ್ಮೆದಾರ್ ಹಿರಣ್ಣಯ ಮತ್ತು ಸಾವಿತ್ರಮ್ಮನವರ ಮಗನಾದ ರಾಮಮೂರ್ತಿ ಹಾಗೂ ಕಮಲಮ್ಮನವರಿಗೆ ಜನಿಸಿದ ಹಾಸನ ರಾಮಮೂರ್ತಿ ಲತ ಆದ ನಾನು ವಿವಾಹಿತಳಾಗಿ ಸೇರಿದ್ದು ಬೆಳ್ಳೂರು .
ದಿ ವೆಂಕ ಟೇ ಶ ಯ್ಯ ಹಾ ಗೂ ದಿ ಸುಬ್ಬಮ್ಮನವರಮಗನಾದದಿವೆಂಕಟಸುಬ್ಬರಾವ್ ಹಾಗೂ ಶಾರದಮ್ಮನವರ ಕಿರಿಯ ಮತ್ತು ಕಡೆಯ ಮಗನಾದ ಬಿ ವಿ ಜಗದೀಶ ರನ್ನು ವರಿಸಿ ನನ್ನ ಜೀವನ ಯಾತ್ರೆಯನ್ನು ಸುಸಂಸ್ಕೃತ ವಾಗಿ ನಡೆಸುತ್ತಾ , ಜೀವ ನ ದ ಲ್ಲಿ ಎ ನಾ ದ ರೂ ಸಾ ಧ ನೆ ಮಾಡಬೇಕೆಂಬಉದ್ದೇಶದಿಂದನನ್ನಈಚೊಚ್ಚಲ ಕಾ ದಂಬ ರಿಯಾದ "ಪ್ರೇ ಮಾಮೃತ" ವನ್ನುಜಸಾಮಾನ್ಯರಮನಸ್ಸನ್ನು ಮ ಟ್ಟು ವಂತೆ ಒಂದು ಪ್ರಯತ್ನವನ್ನು ಮಾಡಿದ್ದೇನೆ .
ಈ ನನ್ನ " ಪ್ರೇ ಮಾಮೃತ " ಕೃತಿ ಯನ್ನು ತಾವುಗಳು ಓದಿ ಆಶಿರ್ವಾದ ಮಾಡ ಬೇಕೆಂದು ವಿನಂತಿಸಿಕೊಳ್ಳುತ್ತೇನೆ .
ಇಂತಿ ತಮ್ಮ ವಿಶ್ವಾಸಿ
ಹಾ ರಾ ಲತ
ಪೀಟಿಕೆ
ಈಕಾದಂಬರಿಯಲ್ಲಿಬರುವಎಲ್ಲಾಪಾತ್ರಗಳುಕಾಲ್ಪನಿಕವಾದುದುಹಾಗೂ ಇದರಲ್ಲಿಬರುವಪಾತ್ರಗಳುಯಾರಿಗೂಅನ್ವಯಿಸುವುದಿಲ್ಲ .
ಈಗಿನ ಸಮಾಜದಲ್ಲಿ ಜನ ಸಾಮಾನ್ಯರು ನೋಡುವ ವಿಷಯವೇನೆಂದರೆ ಒಂದು ಸಂಸಾರದಲ್ಲಿ ಅತ್ತೆ ಸೊಸೆಯರ ಜಗಳ , ಮಾವ ಅಳಿಯಂದಿರ ಜಗಳ ಅಕ್ಕತಂಗಿಯರ ಕಚ್ಚಾಟ , ಅಣ್ಣ ತಮ್ಮಂದಿರ ಹೊಡೆದಾಟ , ಸ್ನೇಹಿತರ ಕಾದಾಟ. ಪರಸ್ಪರ ಪ್ರೀತಿ , ಪ್ರೇಮ , ಅನುರಾಗವು ಮತ್ತು ವಿಶ್ವಾಸವು ಜನ ಸಾಮಾನ್ಯರ ಜೀವನದಲ್ಲಿ ಕಾಣೆ ಯಾಗಿರುತ್ತದೆ .
ಆದರೆ ಈ ನನ್ನ ಪ್ರೇಮಾಮೃತ ಕಾದಂಬರಿಯಲ್ಲಿ ಬರುವ ಪಾತ್ರಗಳೆಲ್ಲವೂ ಇದರ ತದ್ವಿರುದ್ದ . ಅಂದರೆ ಒಂದು ಸಂಸಾರದಲ್ಲಿ ಅತ್ತೆ ಸೊಸೆಯರ ಪ್ರೀತಿ, ಮಾವ ಅಳಿಯಂದಿರ ವಿಶ್ವಾಸ , ಅಣ್ಣ ತಮ್ಮಂದಿರ ಅನುರಾಗ , ಸ್ನೇಹಿತರುಗಳ ನಂಬಿಕೆ ವಿಶ್ವಾಸ , ಹಾಗ ತಾಯಿ ಮಕ್ಕಳ ಪ್ರೆಮಗಳಿಂದ ಕೂಡಿದೆ .
ಈ ನಮ್ಮ ಸಮಾಜದಲ್ಲಿ ಜೀವನವು ಈ ರೀತಿ ಪ್ರೇ ಮಾ ಮೃ ತ ದಿಂದ
ರಸಭರಿ ತವಾದರೆ ನಮ್ಮೆಲ್ಲರ ಜೀವನವು ಎಷ್ಟು ಸೊಗಸಲ್ಲವೆ ?
ಹಾ ರಾ ಲತ
ಪ್ರೇಮಾಮೃತ ------ 1
ಸಾರ್ ಸಾರ್ ಬಾಗಿಲು ಎಂದು ಬಾಗಿಲು ತಟ್ಟುತ್ತಾನೆ . ಯಾರು ? ಎಂದು ಬಾಗಿಲು ತೆಗೆದಾಗ , ಎಂದೂ ನೋಡಿರದ ಸುಮಾರು ಆರೂವರೆ ಅಡಿ ಯಷ್ಟು ಎತ್ತರವುಳ್ಳ ಕಪ್ಪು ಬಣ್ಣದ ಸುಂದರವಾದ ದೃಡ ಕಾಯಅಜಾನುಬಾಹುವಂತಿರುವ
ಸುಮಾರು ಇಪ್ಪತೈದು ವರ್ಷದ ತರುಣನು, ಬೇಗ ನೀರು ಕೊಡಿ , ಅಮ್ಮ ಬಹಳ ಸುಸ್ತಾಗಿದ್ದಾಳೆ ಎಂದು ಆತಂಕದಿಂದ ಕೇಳುತ್ತಾನೆ ಈಗ ಕೊಟ್ಟೆಅಂಕಲ್ಎಂದು ಓಡಿ ಹೋಗಿ ನೀರು ತಂದುಕೊಡುತ್ತಾಳೆ . ಎಲ್ಲಿ ಅಂಕಲ್ , ಆಂಟಿ ಎಂದುಕೇಳಿಅವನನ್ನೇ ಹಿಂಬಾಲಿಸುತ್ತಾಳೆ ಅತ್ಯಂತ ಸುಂದರವಾಗಿರುವ ಬಿಳಿ ಬಣ್ಣದ ಮುದ್ದು ಮುದ್ದಾಗಿರುವ ಬೋಳು ಹಣೆ ,ಬೋಳುಗೈ ಬೋಳುಗಿವಿಯಲ್ಲಿರುವ ಎತ್ತರವಾಗಿ ಪುಟ್ಟ ಜುಟ್ಟು ಕಟ್ಟಿರುವ ಸುಮಾರು ಹದಿನಾಲ್ಕು ವರ್ಷದ ಬಾಲಕಿ ಲಕ್ಷ್ಮಿ . ಸ್ವಲ್ಪ ನೀರನ್ನು ಕ್ಚುಮಿಕಿಸಿದ ನಂತರ ಉಸಿರಾಡುತ್ತಾರೆ ಸುಮಾರು ಐವತ್ತು ವರುಷದ ವಿಧವೆ ನರಸಮ್ಮನವರು .ಆಂಟಿ ಎದ್ದೇಳಿ ನಮ್ಮನೆ ಇಲ್ಲೇ ಇದೆ ಬನ್ನಿ ಎಂದು ಅವರಿಬ್ಬರನ್ನೂ ಮನೆಗೆ ಕರೆತರುತ್ತಾಳೆ ಲಕ್ಷ್ಮಿ .ಆಂಟಿ ಇಲ್ಲೇ ಕುಳಿತುಕೊಳ್ಳಿ ಎಂದು ದೀವಾನ ತೋರಿಸಿ , ಇನ್ನೂ ಸ್ವಲ್ಪ ನೀರುಕೊಡಲೇ ಎಂದು ಕೇಳುತ್ತಾಳೆ . ಬೇಡ ಮಗೂ , ಚೂರೇ ಚೂರು ಸಕ್ಕರೆ ಕೊಡು ಎಂದು ಕೇಳುತ್ತಾರೆ ನರಸಮ್ಮನವರು .ಆಂಟಿ ನಿಮಗೆ ಸಕ್ಕರೇನೆ ಬೇಕಾ ? ಇವತ್ತು ನನಗೆ ಇಷ್ಟ ಅಂತ ಮಮ್ಮಾಜಿ ಜಾಮೂನ್ ಮಾಡಿ ದ್ದಾಳೆ ಕೊಡಲಾ ? ಎಂದು ಬಹಳ ಚೂಟಿಯಾಗಿರುವ ಲಕ್ಷ್ಮಿ ಓಡಿ ಹೋಗಿ ಅಡು ಗೆಮನೆಯಿಂದ ತಟ್ಟೆಯಲ್ಲಿ ಜಾಮೂನ್ ಮತ್ತು ಬಿಸಿಬೇಳೆಬಾತ್ ಅನ್ನು ಹಿಡಿದು ಬಂದು ದಿವಾನಾ ಮೇಲೆ ಮಲಗಿದ್ದ ನರಸಮ್ಮನವರನ್ನು ಎಬ್ಬಿಸಿ ಆಂಟಿ ನಾನೇ ತಿನ್ನಿಸುತ್ತೇನೆ ಎಂದು ಅಕ್ಕರೆಯಿಂದ ಜಾಮೂನಿನ ಕ್ಷೀರವನ್ನು ಬಾಯಿಗಿಡುತ್ತಾಳೆ ದೀಪೂ ನೀನೂ ಸ್ವಲ್ಪ ತಗೊಳ್ಳೋ ಎಂದಾಗ ...............
ಮುಂದುವರಿಯುವುದು .........................
No comments:
Post a Comment