ನವರಾತ್ರಿ ಹಬ್ಬ ವನ್ನು ನಮ್ಮ ಮನೆಯಲ್ಲಿ ಸರಸ್ವತಿ ಹಬ್ಬ ದಿಂದ ಆಚರಿಸುತ್ತೇವೆ .ಈ ಫೋಟೋ ದಲ್ಲಿರುವ ಗೊಂಬೆಯನ್ನು ನಿಲುಗೌರಿ ಎಂದು ಕರೆಯುತ್ತೇವೆ . ಈ ಗೌರಿಯು ಸುಮಾರು ಅರವತ್ತು ವರುಷದ ಹಿಂದಿನ ಮರದ ಗೊಂಬೆ . ಇದು ನನಗೆ ನನ್ನ ಅತ್ತೆಯವರಾದ ದಿವಂಗತ ಶಾರದಮ್ಮ ವೆಂಕಟಸುಬ್ಬರಾವ್ ಅವರ ಆಶಿರ್ವಾದ ದಿಂದ ಸಿಕ್ಕಿದ್ದು . ಇದನ್ನು ನಾವು ಇಪ್ಪತೇಳು ವರುಷಗಳಿಂದ ದೇವರ ಕೃಪೆಯಿಂದ ದಸರಾ ಹಬ್ಬವನ್ನು ಆಚರಿಸುತ್ತಾ ಬಂದಿದ್ದೇವೆ . ಇದರ ಇನ್ನೊಂದು ವಿಷೇಶತೆ ಏನೆಂದರೆ ಸರಸ್ವತಿ ಹಬ್ಬದಂದು ನಮ್ಮ ಅತ್ತೆಯವರಾದ ಶಾರದಮ್ಮ ನವರ ಹುಟ್ಟು ಹಬ್ಬವಾಗಿರುತ್ತದೆ .
by
ಲತ ಜಗದೀಶ
No comments:
Post a Comment