Saturday, 29 December 2012

ಪ್ರೇಮಾಮೃತ -----------10






                                                  ಪ್ರೇಮಾಮೃತ -----------10

ಅರ್ಧ ಘಂಟೆಯ ನಂತರ ಪ್ರೊಫೆಸರ್ ಕಾರ್ ಬಂದ  ತಕ್ಷಣವೇ  ಕಾರನ್ನು ಹತ್ತಿ ಗುಡ್ ಮಾರ್ನಿಂಗ್ ಸರ್  ಎಂದು ಹೇಳಿದಳು ಲಕ್ಷ್ಮಿ .  ಹಸಿರು ಮತ್ತು ಕೆಂಪು ಬಣ್ಣದ ರೇಷ್ಮೆ ಚೂಡಿದಾರ್ ನಲ್ಲಿದ್ದ ಲಕ್ಷ್ಮಿಯು ಅತ್ಯಂತ ಸುಂದರವಾಗಿ ಮುದ್ದುಮುದ್ದಾಗಿ ಕಾಣಿಸುತ್ತಿದ್ದಳು.  ಪುಟ್ಟು, ಇಂದಿನ ಸ್ಪರ್ಧೆಗೆ ತಯಾರಿ ಜೋರಾಗೇ  ಇದ್ದ ಹಾಗಿದೆ ಎಂದು ತುಂಟತನದಿಂದ ಛೇಡಿಸುತ್ತಾನೆ .  ಕಾಲೇಜಿಗೆ ಹೋಗುವ ದಾರಿಯಲ್ಲಿ ಒಂದು ದೇವಸ್ತಾನದ ಹತ್ತಿರ ಕಾರು ನಿಲ್ಲಿಸಿ , ದೇವರಿಗೆ ನಮಸ್ಕರಿಸಿ , ಅಲ್ಲಿಯೇ ಒಂದು ಗಾಡಿಯಲ್ಲಿ  ಎಳನೀರು ಮಾರುತ್ತಿರುವುದನ್ನು ಕಂಡು, ಇಬ್ಬರೂ ಎಳನೀರನ್ನು ಕುಡಿದು ಕಾಲೇಜಿಗೆ ಮುಂದುವರಿಯುತ್ತಾರೆ .  ಕಾಲೇಜಿನಲ್ಲಿ ಪ್ರೊಫೆಸರ್ ತನ್ನ ಜವಾಬ್ದಾರಿಯುತ ಕೆಲಸವನ್ನು ಬೇರೊಬ್ಬರಿಗೆ ವಹಿಸಿ , ಲಕ್ಷ್ಮಿಗೆ ಅವಳ ಕ್ಲಾಸ್ ಟೀಚರ್ ಹತ್ತಿರ  ಅಟೆಂಡೆನ್ಸ್  ಹಾಕಿಸಿ  ಇಬ್ಬರೂ ಸುಮಾರು ಎಂಟು ಮುಕ್ಕಾಲು ಘಂಟೆಗೆ ಕಾಲೇಜಿನಿಂದ ಸ್ಪರ್ಧೆ ನಡೆಯುವ ಸ್ಥಳವಾದ ಕಲಾಕ್ಷೇತ್ರಕ್ಕೆ ಹೊರಡುತ್ತಾರೆ .ಅಲ್ಲಿ ತಲುಪಿದಾಕ್ಷಣವೇ ದೀಪಕ್ ಲಕ್ಷ್ಮಿಯ ಹೆಸರನ್ನು ದಾಖಲಿಸಿ ಅವಳಿಗೆ ಬೆಸ್ಟ್ ಆಫ್ ಲಕ್ ತಿಳಿಸಿ ನಾನಿನ್ನು ಬರುತ್ತೇನೆ ಎಂದು  ಹೊರಡುತ್ತಾನೆ. 

                                                        ಮುಂದುವರಿಯುವುದು -------------

Friday, 21 December 2012

ಪ್ರೇಮಾಮೃತ -------------9






                               ಪ್ರೇಮಾಮೃತ -------------9

ಬೆಳಿಗ್ಗೆ ಆರು ಘಂಟೆಗೆ ಸರಿಯಾಗಿ ಬಸ್ಸುನಿಲ್ದಾಣಕ್ಕೆ  ಹೋಗಿ ನಿಂತ ಲಕ್ಷ್ಮಿಗೆ , ಆರು ಘಂಟೆ ಹತ್ತು ನಿಮಿಷವಾದರೂ ಬಸ್ಸು ಬರದೇ  ಇದ್ದಾಗ ಗಾಬರಿಗೊಂಡು, ಹಿಂದಿನ ದಿನ ಪ್ರೊಫೆಸರ್ ಕೊಟ್ಟಿದ್ದ ಮೊಬೈಲ್ ನಂಬರ್ ಗೆ ಫೋನ್ ಮಾಡುತ್ತಾಳೆ.  ಬಚ್ಚಲು ಮನೆಯಲ್ಲಿ ಅರ್ಧ ಶೇವ್ ಮಾಡಿಕೊಳ್ಳುತ್ತಿದ್ದ ದೀಪಕ್ , ಲಕ್ಷ್ಮಿಯ ನಂಬರ್ ನೋಡಿದೊಡನೆ, ಯಾಕೋ ಮರೀ ಏನಾಯ್ತೋ ಎನ್ನುತ್ತಾನೆ.  ಅದಕ್ಕೆ ಲಕ್ಷ್ಮಿಯು , ಪ್ರೊಫೆಸರ್ ಸರ್ ,ಇವತ್ತು ಇನ್ನೂ ಬಸ್ಸೇ ಬಂದಿಲ್ಲ ಎಂದಾಗ, ಹೋಗಲಿ ಬಿಡು ಮರಿ  ಚಿಂತೆ ಮಾಡಬೇಡ ನಾನೇ ಬಂದು ಕರೆದುಕೊಂಡು ಹೋಗುತ್ತೀನಿ ಎನ್ನುತ್ತಾನೆ .  ಧನ್ಯವಾದಗಳು ಸರ್ ಎಂದು ಫೋನ್ ಕಟ್  ಮಾಡಿದ ತಕ್ಷಣವೇ  ಬಸ್ಸು ಬರುತ್ತಿರುವುದು ದೂರದಿಂದಲೇ ಕಾಣುತ್ತಿರುತ್ತದೆ.  ಮತ್ತೆ ಸರ್ ಗೆ ಫೋನ್ ಮಾಡಿ , ಸಂತಸ ಮತ್ತು ಉದ್ವೇಗದಿಂದ  ಮುದ್ದು ಮುದ್ದಾಗಿ  , ಪ್ರೊಫೆಸರ್ ಸರ್, ಪ್ರೊಫೆಸ್ಸರ್ ಸರ್ , ಬಸ್ಸು ಬಂದಿತು ಎಂದು ಅನ್ನುತ್ತಾಳೆ  . ಆಯ್ತು ಮರಿ ಬಸ್ಸಿನಲ್ಲಿ ಬಂದು, ಬೇಕರಿ ಬಸ್ ನಿಲ್ದಾಣದ ಹತ್ತಿರ ಇರು , ಅಲ್ಲಿಂದ ನಾನು ಕರೆದು ಕೊಂಡು  ಹೋಗುತ್ತೀನಿ ಎಂದು ಹೇಳಿ ಫೋನ್ ಕಟ್ ಮಾಡುತ್ತಾನೆ ದೀಪು.  ಅಲ್ಲಿಂದ ಹೋರಟ ಬಸ್ಸು ಎರಡು ಮೂರು ಸ್ಟಾಪ್ ಹೋಗುತ್ತಿದ್ದಂತೆ  ಕೆಟ್ಟು ಹೋಗುತ್ತದೆ. ಮತ್ತೆ ಲಕ್ಷ್ಮಿಯು ಆತಂಕ ಮತ್ತು ಸಂಕೋಚದಿಂದ ಸರ್ ಗೆ ಫೋನ್ ಮಾಡಿ ಸರ್ , ಬಸ್ಸು ಕೆಟ್ಟು ಹೋಯಿತು , ಇಲ್ಲಿ ಆಟೋ ಕೂಡ ಇಲ್ಲ  ಎಂದು ಪೆಚ್ಚಾಗಿ ನುಡಿದಾಗ , ಏನೋ ಪುಟ್ಟ ಇವತ್ತು ಬೆಳಿಗ್ಗೆ ಯಿಂದ ನಿನ್ನ ಗಲಾಟೆ ಎಂದು ಮುದ್ದಿನಿಂದ, ಸ್ನಾನ ಮಾಡಲೂ ಬಿಡಲ್ಲವಲ್ಲೋ  ಮರಿ ಎಂದು , ಈಗ ಎಲ್ಲಿದ್ದಿ  ಎಂದು ಕೇಳಿ  , ಸರಿ ಅಲ್ಲೇ ಇರು , ಇನ್ನು ಅರ್ಧ ಘಂಟೆ ಯಲ್ಲಿ ನಾನೇ ಬಂದು ಕರೆದು ಕೊಂದು ಹೋಗುತ್ತೀನಿ ಅನ್ನುತ್ತಾನೆ. ಧನ್ಯವಾದಗಳು ಸರ್ ಎಂದು ಫೋನ್ ಕಟ್ ಮಾಡುತ್ತಾಳೆ ಲಕ್ಷ್ಮಿ.  


                                                                                           ಮುಂದುವರಿಯುವುದು .......................



Wednesday, 19 December 2012

ಪ್ರೇಮಾಮೃತ----------8

                             


                                    ಪ್ರೇಮಾಮೃತ-----------8

ಲಕ್ಷ್ಮಿಗೆ ಬಸ್ಸು ಸಿಕ್ಕಿ ಮನೆಗೆ ಬರುವಷ್ಟರಲ್ಲಿ , ಅವಳು ದಿನಾ ಬರುವ ಸಮಯಕ್ಕೆ ಮನೆಗೆ ಬರದಿದ್ದ ಕಾರಣ ಅವಳ ಅಮ್ಮ ಆತಂಕದಿಂದ ಹೊರಗೆ ಒಳಗೆ ಸುತ್ತಾಡುತ್ತಿದ್ದರು.  ಲಕ್ಷ್ಮಿಯನ್ನು ನೋಡಿದೊಡನೆ ಅವರಿಗೆ ಆದ ಸಂತೋಷ ಅಷ್ಟಿಷ್ಟಲ್ಲ .  ಸದ್ಯ ಬಂದ್ಯಲ್ಲ.  ನನಗೆ  ಯಾಕೋ ಬರಲಿಲ್ಲವಲ್ಲಪ್ಪ, ಕಾಲೇಜ್ ಬೇರೆ ತುಂಬಾ ದೂರ ಅಂತ ಚಿಂತೆ ಯಾಗಿತ್ತು  ಅಂತ ಮಗಳೊಂದಿಗೆ ತಮ್ಮ ಮನಸ್ಸಿನ  ಗೊಂದಲವನ್ನು ತೋಡಿಕೊಂಡರು  ಶಾಂತಮ್ಮನವರು.

ಲಕ್ಷ್ಮಿಯು ತನ್ನ ಅಮ್ಮನಿಗೆ ,ಅಮ್ಮ ಇವತ್ತು ಕಾಲೇಜಿನಲ್ಲಿ  ಎಂದು  ನಡೆದ ವಿಷಯವನ್ನೆಲ್ಲ ತಿಳಿಸಿ , ನಮ್ಮ ಪ್ರೊಫೆಸರ್ ಸರ್ ತುಂಬಾ ಒಳ್ಳೆಯವರು  ಎಂದು , ಅವರಿಗೆ ಕೆಟ್ಟದ್ದು ಅಂದರೆ ಗೊತ್ತೇ ಇಲ್ಲ. ವಿಧ್ಯಾರ್ಥಿ ಗಳನ್ನೆಲ್ಲಾ ಎಷ್ಟು ಮುದ್ದಿನಿಂದ ಮಾತನಾಡಿಸುತ್ತಾರೆ , ಅವರು ಮಾಡುವ  ಪಾಠವಂತೂ  ಹೇಳತೀರದು  ಎಂದೆಲ್ಲ  ಅವರನ್ನು ಗುಣಗಾನ ಮಾಡಿದಳು ..  ನಾನು ತುಂಬಾ ಅದೃಷ್ಟವಂತೆ ಮಮ್ಮಿ, ಅಂಥ ಪ್ರೊಫೆಸರ್ 'ನ ವಿಧ್ಯಾರ್ಥಿ ಯಾಗಲು ಎಂದೆಲ್ಲ  ಅತ್ಯಂತ ಸಂತಸದಿಂದ  ಬಡಬಡ  ಅಂತ ಒಂದೇಸಮನೆ ಮಾತನಾಡುತ್ತಿದ್ದಳು.   ಲಕ್ಷ್ಮಿ ನೀನು ಬರಿ ನಿಮ್ಮ ಪ್ರೊಫೆಸರ್ ನ ಹೊಗಳುತ್ತಿರುವೆಯೋ ಅಥವಾ ಊಟಮಾಡುವಿಯೋ  ಎಂದು ಛೇ ಡಿಸುತ್ತಿದ್ದರು  ಶಾಂತಮ್ಮನವರು .  ರಾತ್ರಿ ಊಟ ಮಾಡುವಾಗ  ಮಮ್ಮಿ ಬೆಳಿಗ್ಗೆ ನಾಲಕ್ಕು ಘಂಟೆ ಗೆ ಎಬ್ಬಿಸು .  ಕಾಲೇಜ್ ಗೆ ಸರಿಯಾದ ಸಮಯಕ್ಕೆ ಹೋಗಬೇಕು , ಎಂದವಳು , ರಾತ್ರಿ ಇಡೀ  ನಿದ್ರೆ ಯೇ  ಇಲ್ಲದೆ ಬೇಗ ಎದ್ದು ತಯಾರಾಗಿ , ಹಾಡಿನ ಕ್ಯಾಸೆಟ್ ಡ್ಯಾನ್ಸ್ ಗಾಗಿ , ಮತ್ತು ಡ್ಯಾನ್ಸ್ ಡ್ರೆಸ್ ಎಲ್ಲಾ ತೆಗೆದುಕೊಂಡು ಬಹಳ ಅಚ್ಚುಕಟ್ಟಾಗಿ , ಡ್ಯಾನ್ಸ್ ಗೆ ಬೇಕಾದಂತೆ ಕಿವಿಗೆ ವಾಲೆ ಜುಮುಕಿ , ಕೈ ತುಂಬಾ ಮಿಣಮಿಣ  ಅಂತ ಬಳೆಗಳನ್ನು ತೊಟ್ಟು ಸಂಭ್ರಮದಿಂದ ಬೆಳಿಗ್ಗೆ  ಆರು ಘಂಟೆ ಯ  ಬಸ್ಸಿಗೆಂದು  ಹೊರಡುತ್ತಾಳೆ ಲಕ್ಷ್ಮಿ.

                                                               ಮುಂದುವರಿಯುವುದು................ .................

Saturday, 8 December 2012

ಪ್ರೇಮಾಮೃತ ------- -೭

                               

                                ಪ್ರೇಮಾಮೃತ ----------------೭

ಮಧ್ಯಾನ್ಹದ  ವೇಳೆಯಲ್ಲಿ ಬಸ್ಸಿನ ಅಭಾವವಾದ್ದರಿಂದ, ಲಕ್ಷ್ಮಿಯು ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಾ ಒಬ್ಬಳೇ ಕುಳಿತಿದ್ದಳು. ಒಂದು ಬಿಳಿಯ ಬಣ್ಣದ ಕಾರು ಮುಂದೆ ಹೋಗಿ ಹಿಂದಕ್ಕೆ ವಾಪಸ್ಸು ಬಂದಿದ್ದನ್ನು ನೋಡಿ ಗಾಭಾರಿಯಾದಳು .  ಓಯ್  ಯಾಕೋ  ರಾಜ ,ಬಸ್ಸು ಸಿಕ್ಕಲಿಲ್ಲವೇನೋ ? ಬಾ ನಾನು ಹೇಗೂ ಡೈರೆಕ್ಟರ್  ಆಫೀಸ್ ಗೆ ಹೋಗುತ್ತೀದ್ದೀನಿ ಅಲ್ಲಿ ತನಕ ನಿನ್ನನ್ನೂ ಬಿಟ್ಟು ಹೋಗುತ್ತೀನಿ ಎಂದಾಗ ಪ್ರೊಫೆಸರ್ ದ್ವನಿ ಕೇಳಿದಾಗ ಗಾಭರಿಯಾಗಿದ್ದ  ಲಕ್ಷ್ಮಿಗೆ ಸ್ವಲ್ಪ ನೆಮ್ಮದಿ ಆಯಿತು. ಆದರೂ ಸಂಕೋಚದಿಂದ ಪರವಾಗಿಲ್ಲ ಸಾರ್ ಎನ್ನುತ್ತಾಳೆ.  ಯಾಕೋ ಪುಟ್ಟ ಭಯ ಏನೋ ಅಂದಾಗ ,ಹಾಗೇನಿಲ್ಲ ಸರ್ ಎಂದು ಕಾರನ್ನು ಹತ್ತುತ್ತಾಳೆ ಲಕ್ಷ್ಮಿ.   ನಂತರ ದೀಪಕ್, ಬೆಳಿಗ್ಗೆ ನಿಮ್ಮ ಮನೆಯ ಹತ್ತಿರ ಬಸ್ಸು ಎಷ್ಟು ಹೊತ್ತಿಗೆ ಇದೆ . ನಾಳೆ ೮.೩೦ಗೆ ಸರಿಯಾಗಿ ನೀನು ಕಾಲೇಜಿನಲ್ಲಿ ಇರಬೇಕು.  ಅದಕ್ಕೆ ಆಯ್ತು ಸಾರ್ ಅನ್ನುತ್ತಾಳೆ .  ನಾಳೆ ನೀನು ದೇವರನಾಮದ ಸ್ಪರ್ಧೆ ಗೆ ಯಾವ ಹಾಡು ಹೇಳುತ್ತೀ ? ವಾತಾಪಿ ಹೇಳೋ ಅಂದಾಗ , ಹೋಗಿ , ಪ್ರೊಫೆಸರ್ ಸರ್ ಅದನ್ನು ಎಲ್ಲರೂ ಹೇಳುತ್ತಾರೆ  ಅಂದಾಗ ಆದರೇನು ಅದು ತುಂಬಾ ರಿಚ್ ಹಾಡು ಎನ್ನುತ್ತಾನೆ .  ಸರಿ ಭಾವಗೀತೆಗೆ /ನಾಡಗೀತೆಗೆ ಯಾವ ಹಾಡು ಎಂದುದಕ್ಕೆ ಜೋಗದಸಿರಿಬೇಳಕಿನಲ್ಲಿ ಬಿ ಆರ್ ಛಾಯ ಅವರು ಹಾಡಿದ್ದಾರಲ್ಲ , ಅದನ್ನು ಹಾಡುತ್ತೇನೆ ಎಂದುದಕ್ಕೆ ನಕ್ಕು,  ಜನಪದಗೀತೆ ಎಂದಾಗ ಇನ್ನೂ ಯೋಚಿಸಿಲ್ಲಾ ಅನ್ನುತ್ತಾಳೆ .  ನಂತರ ಪುಟ್ಟು  ಭರತನಾಟ್ಯ ಬರುತ್ತಾ? ಅಂತ ಕೇಳಿದ ಪ್ರೊಫೆಸರ್ ಗೆ , ಹೂಂ ಬರುತ್ತೆ , ಆದರೆ ಪಪ್ಪಾ ನೀನು ಇನ್ನುಮೇಲೆ ಡ್ಯಾ ನ್ಸ್ ಎಲ್ಲಾ ಮಾಡಬಾರದು ಕಾಲೇಜಿಗೆ ಬಂದ್ದಿದ್ದೀಯ ಚೆನ್ನಾಗಿರಲ್ಲ ಅಂದಿದ್ದಾರೆ ಅದಕ್ಕೆ ಬೇಡ ಅನ್ನುತ್ತಾಳೆ ಲಕ್ಷ್ಮಿ .ಹಾಗಾದರೆ ಒಂದು ಕೆಲಸ ಮಾಡು ಅಕಸ್ಮಾತ್ ಒಂದೆರಡು ಕಾರ್ಯಕ್ರಮದಲ್ಲಿ ನಿನಗೆ ಪ್ರಶಸ್ತಿ ಬಂದರೆ ಭರತನಾ ಟ್ಯ ವನ್ನು ಮಾಡು ಇಲ್ಲವಾದರೆ ಬೇಡ ಎಂದು ಹೇಳಿ ,ಅವಳ ಮನೆಗೆ ಸುಲಭವಾಗಿ ಬಸ್ಸು ಸಿಕ್ಕುವ ಜಾಗದಲ್ಲಿ ಇಳಿಸಿ ತಾನು ಡೈರೆಕ್ಟರ್ ಆಫಿಸೀಗೆ ಮುಂದುವರಿಯುತ್ತಾನೆ ಪ್ರೊಫೆಸ್ಸರ್.  

                                                       ಮುಂದುವರಿಯುವುದು ------------


Thursday, 6 December 2012

ಸ್ನೇಹ ರಮಾಕಾಂತ್ ಹುಟ್ಟು ಹಬ್ಬದ ಶುಭಾಶಯಗಳು

ಸ್ನೇಹ ರಮಾಕಾಂತ್  ಹುಟ್ಟು ಹಬ್ಬದ ಶುಭಾಶಯಗಳು 
animation  creaed by  bvjagadeesha