ಪ್ರೇಮಾಮೃತ-----------8
ಲಕ್ಷ್ಮಿಗೆ ಬಸ್ಸು ಸಿಕ್ಕಿ ಮನೆಗೆ ಬರುವಷ್ಟರಲ್ಲಿ , ಅವಳು ದಿನಾ ಬರುವ ಸಮಯಕ್ಕೆ ಮನೆಗೆ ಬರದಿದ್ದ ಕಾರಣ ಅವಳ ಅಮ್ಮ ಆತಂಕದಿಂದ ಹೊರಗೆ ಒಳಗೆ ಸುತ್ತಾಡುತ್ತಿದ್ದರು. ಲಕ್ಷ್ಮಿಯನ್ನು ನೋಡಿದೊಡನೆ ಅವರಿಗೆ ಆದ ಸಂತೋಷ ಅಷ್ಟಿಷ್ಟಲ್ಲ . ಸದ್ಯ ಬಂದ್ಯಲ್ಲ. ನನಗೆ ಯಾಕೋ ಬರಲಿಲ್ಲವಲ್ಲಪ್ಪ, ಕಾಲೇಜ್ ಬೇರೆ ತುಂಬಾ ದೂರ ಅಂತ ಚಿಂತೆ ಯಾಗಿತ್ತು ಅಂತ ಮಗಳೊಂದಿಗೆ ತಮ್ಮ ಮನಸ್ಸಿನ ಗೊಂದಲವನ್ನು ತೋಡಿಕೊಂಡರು ಶಾಂತಮ್ಮನವರು.
ಲಕ್ಷ್ಮಿಯು ತನ್ನ ಅಮ್ಮನಿಗೆ ,ಅಮ್ಮ ಇವತ್ತು ಕಾಲೇಜಿನಲ್ಲಿ ಎಂದು ನಡೆದ ವಿಷಯವನ್ನೆಲ್ಲ ತಿಳಿಸಿ , ನಮ್ಮ ಪ್ರೊಫೆಸರ್ ಸರ್ ತುಂಬಾ ಒಳ್ಳೆಯವರು ಎಂದು , ಅವರಿಗೆ ಕೆಟ್ಟದ್ದು ಅಂದರೆ ಗೊತ್ತೇ ಇಲ್ಲ. ವಿಧ್ಯಾರ್ಥಿ ಗಳನ್ನೆಲ್ಲಾ ಎಷ್ಟು ಮುದ್ದಿನಿಂದ ಮಾತನಾಡಿಸುತ್ತಾರೆ , ಅವರು ಮಾಡುವ ಪಾಠವಂತೂ ಹೇಳತೀರದು ಎಂದೆಲ್ಲ ಅವರನ್ನು ಗುಣಗಾನ ಮಾಡಿದಳು .. ನಾನು ತುಂಬಾ ಅದೃಷ್ಟವಂತೆ ಮಮ್ಮಿ, ಅಂಥ ಪ್ರೊಫೆಸರ್ 'ನ ವಿಧ್ಯಾರ್ಥಿ ಯಾಗಲು ಎಂದೆಲ್ಲ ಅತ್ಯಂತ ಸಂತಸದಿಂದ ಬಡಬಡ ಅಂತ ಒಂದೇಸಮನೆ ಮಾತನಾಡುತ್ತಿದ್ದಳು. ಲಕ್ಷ್ಮಿ ನೀನು ಬರಿ ನಿಮ್ಮ ಪ್ರೊಫೆಸರ್ ನ ಹೊಗಳುತ್ತಿರುವೆಯೋ ಅಥವಾ ಊಟಮಾಡುವಿಯೋ ಎಂದು ಛೇ ಡಿಸುತ್ತಿದ್ದರು ಶಾಂತಮ್ಮನವರು . ರಾತ್ರಿ ಊಟ ಮಾಡುವಾಗ ಮಮ್ಮಿ ಬೆಳಿಗ್ಗೆ ನಾಲಕ್ಕು ಘಂಟೆ ಗೆ ಎಬ್ಬಿಸು . ಕಾಲೇಜ್ ಗೆ ಸರಿಯಾದ ಸಮಯಕ್ಕೆ ಹೋಗಬೇಕು , ಎಂದವಳು , ರಾತ್ರಿ ಇಡೀ ನಿದ್ರೆ ಯೇ ಇಲ್ಲದೆ ಬೇಗ ಎದ್ದು ತಯಾರಾಗಿ , ಹಾಡಿನ ಕ್ಯಾಸೆಟ್ ಡ್ಯಾನ್ಸ್ ಗಾಗಿ , ಮತ್ತು ಡ್ಯಾನ್ಸ್ ಡ್ರೆಸ್ ಎಲ್ಲಾ ತೆಗೆದುಕೊಂಡು ಬಹಳ ಅಚ್ಚುಕಟ್ಟಾಗಿ , ಡ್ಯಾನ್ಸ್ ಗೆ ಬೇಕಾದಂತೆ ಕಿವಿಗೆ ವಾಲೆ ಜುಮುಕಿ , ಕೈ ತುಂಬಾ ಮಿಣಮಿಣ ಅಂತ ಬಳೆಗಳನ್ನು ತೊಟ್ಟು ಸಂಭ್ರಮದಿಂದ ಬೆಳಿಗ್ಗೆ ಆರು ಘಂಟೆ ಯ ಬಸ್ಸಿಗೆಂದು ಹೊರಡುತ್ತಾಳೆ ಲಕ್ಷ್ಮಿ.
ಮುಂದುವರಿಯುವುದು................ .................
No comments:
Post a Comment