ಪ್ರೇಮಾಮೃತ -----------10
ಅರ್ಧ ಘಂಟೆಯ ನಂತರ ಪ್ರೊಫೆಸರ್ ಕಾರ್ ಬಂದ ತಕ್ಷಣವೇ ಕಾರನ್ನು ಹತ್ತಿ ಗುಡ್ ಮಾರ್ನಿಂಗ್ ಸರ್ ಎಂದು ಹೇಳಿದಳು ಲಕ್ಷ್ಮಿ . ಹಸಿರು ಮತ್ತು ಕೆಂಪು ಬಣ್ಣದ ರೇಷ್ಮೆ ಚೂಡಿದಾರ್ ನಲ್ಲಿದ್ದ ಲಕ್ಷ್ಮಿಯು ಅತ್ಯಂತ ಸುಂದರವಾಗಿ ಮುದ್ದುಮುದ್ದಾಗಿ ಕಾಣಿಸುತ್ತಿದ್ದಳು. ಪುಟ್ಟು, ಇಂದಿನ ಸ್ಪರ್ಧೆಗೆ ತಯಾರಿ ಜೋರಾಗೇ ಇದ್ದ ಹಾಗಿದೆ ಎಂದು ತುಂಟತನದಿಂದ ಛೇಡಿಸುತ್ತಾನೆ . ಕಾಲೇಜಿಗೆ ಹೋಗುವ ದಾರಿಯಲ್ಲಿ ಒಂದು ದೇವಸ್ತಾನದ ಹತ್ತಿರ ಕಾರು ನಿಲ್ಲಿಸಿ , ದೇವರಿಗೆ ನಮಸ್ಕರಿಸಿ , ಅಲ್ಲಿಯೇ ಒಂದು ಗಾಡಿಯಲ್ಲಿ ಎಳನೀರು ಮಾರುತ್ತಿರುವುದನ್ನು ಕಂಡು, ಇಬ್ಬರೂ ಎಳನೀರನ್ನು ಕುಡಿದು ಕಾಲೇಜಿಗೆ ಮುಂದುವರಿಯುತ್ತಾರೆ . ಕಾಲೇಜಿನಲ್ಲಿ ಪ್ರೊಫೆಸರ್ ತನ್ನ ಜವಾಬ್ದಾರಿಯುತ ಕೆಲಸವನ್ನು ಬೇರೊಬ್ಬರಿಗೆ ವಹಿಸಿ , ಲಕ್ಷ್ಮಿಗೆ ಅವಳ ಕ್ಲಾಸ್ ಟೀಚರ್ ಹತ್ತಿರ ಅಟೆಂಡೆನ್ಸ್ ಹಾಕಿಸಿ ಇಬ್ಬರೂ ಸುಮಾರು ಎಂಟು ಮುಕ್ಕಾಲು ಘಂಟೆಗೆ ಕಾಲೇಜಿನಿಂದ ಸ್ಪರ್ಧೆ ನಡೆಯುವ ಸ್ಥಳವಾದ ಕಲಾಕ್ಷೇತ್ರಕ್ಕೆ ಹೊರಡುತ್ತಾರೆ .ಅಲ್ಲಿ ತಲುಪಿದಾಕ್ಷಣವೇ ದೀಪಕ್ ಲಕ್ಷ್ಮಿಯ ಹೆಸರನ್ನು ದಾಖಲಿಸಿ ಅವಳಿಗೆ ಬೆಸ್ಟ್ ಆಫ್ ಲಕ್ ತಿಳಿಸಿ ನಾನಿನ್ನು ಬರುತ್ತೇನೆ ಎಂದು ಹೊರಡುತ್ತಾನೆ.
ಮುಂದುವರಿಯುವುದು -------------
No comments:
Post a Comment