Friday, 30 November 2012

ಪ್ರೇಮಾಮೃತ--------೬













                                   ಪ್ರೇಮಾಮೃತ--------೬

ಹೊರಗಡೆಯೇ  ನಿಂತು ಪೂರ್ತಿಯಾಗಿ ಹಾಡನ್ನು ಕೇಳಿದಮೇಲೆ ,ಒಳಗೆ ಬಂದರೆ , ಸುತ್ತಲೂ ಹುಡುಗಿಯರು ಸದ್ದಿಲ್ಲದೇ ಕುಳಿತಿದ್ದು , ಮೇಜಿನ ಮೇಲೆ ಮದ್ಯದಲ್ಲಿ ಕುಳಿತು ಲಕ್ಷ್ಮಿಯು ಹಾಡುತ್ತಿದ್ದ ಹಾಡನ್ನುಅತ್ಯಂತ ತಲ್ಲೀನತೆಯಿಂದ ತುಂಬಾ ಖುಷಿಯಾಗಿ  ಆಲಿಸುತ್ತಿದ್ದುದನ್ನು ಕಂಡ ಪ್ರೊಫೆಸರ್ ಗೆ ಒಂದುನಿಮಿಷ
ಆಶ್ಚರ್ಯವೇ ಆಗುತ್ತದೆ.  ಅವರು ತಕ್ಷಣವೇ ಹಠತ್ತಾಗಿ ಯಾರು ಹಾಡುತ್ತಿದ್ದುದು ? ಎಂದಾಗ ಎಲ್ಲರೂ ಹೆದರಿ ತಲೆತಗ್ಗಿಸಿ ನಿಲ್ಲುತ್ತಾರೆ. ಆಗ   ನೀವಾಗಿ ನೀವು ೧೨.೩೦ ಘಂಟೆಗೆ ಕ್ಲಾಸ್ ಮುಗಿದ ಮೇಲೆ ಪ್ರಾದ್ಯಾಪಕರ ಕೊಠಡಿಗೆ ಬಂದರೆ ಸರಿ ಎಂದು ಗಡುಸು ದ್ವನಿಯಿಂದ ಹೇಳಿ  ವಾಪಸ್ಸು ಹೋಗುತ್ತಾರೆ.ಕ್ಲಾಸ್ ಮುಗಿದ ನಂತರ ಲಕ್ಷ್ಮಿಯು ಪ್ರಾದ್ಯಾಪಕರು ಎಲ್ಲಿ ಬಯ್ಯುತ್ತಾರೋ ಎಂದು ಹೆದರಿ ಹೆದರಿ ೧೨-೩೦ಘಂಟೆಗೆ ಸರಿಯಾಗಿ ಪ್ರಾದ್ಯಾಪಕರ ಕೊಠಡಿ ಯೊಳಗೆ ಅಪ್ಪಣೆ ಪಡೆದು ಬಂದು ಕಣ್ಣಲ್ಲಿ ನೀರು ತುಂಬಿಕೊಂಡು ನಿಂತು  ಕ್ಷಮಿಸಿ ಸಾರ್ , ಇನ್ನೆಂದೂ ಹೀಗೆ ಮಾಡಲ್ಲ ಎಂದು ನಡುಗುತ್ತಾ ಹೇಳುತ್ತಾಳೆ .  ಅವಳನ್ನು ನೋಡಿ ಪ್ರಾದ್ಯಾಪಕರು ಮುಗುಳ್ನಗುತ್ತಾ , ಮಗೂ ನಾನು ನಿನ್ನನ್ನು ಬಯ್ಯಲು ಕರೆಯಲಿಲ್ಲಮ್ಮ ಎಂದು ಪ್ರೀತಿಯಿಂದ ಹೇಳಿ ಅಲ್ಲಿನೋಡು  ಎಂದಾಗ ಅಲ್ಲಿ ಗಂಭಿರವಾಗಿ ನಗುತ್ತ ಪ್ರೊಫೆಸರ್ ದೀಪಕ್ ರಾಜ್ ರವರು ಕುಳಿತಿರುತ್ತಾರೆ. ಅವನು ಅವಳನ್ನು ನಗುತ್ತಾ ಬಾ ಇಲ್ಲಿ ಕುಳಿತುಕೋ ಎಂದು ತನ್ನ ಪಕ್ಕದಲ್ಲಿದ್ದ ಕುರ್ಚಿಯಲ್ಲಿ  ಕೂರಲು ಆಜ್ಞಾಪಿಸುತ್ತಾನೆ.  ಏ ಪುಟ್ಟು, ನಾಳೆ ದಿವಸ  ಕಲಾಕ್ಷೇತ್ರದಲ್ಲಿ ಇಂಟರ್ ಕಾಲೇಜ್ ವಿವಿಧರೀತಿಯ ಸಾಂಸ್ಕೃತಿಕ ಸ್ಪರ್ಧೆ ನಡೆಯಲಿದೆ . ನೀನು ಭಾಗವಹಿಸುವೆಯ? ಎಂದು ಮುದ್ದಿನಿಂದ ಕೇಳಿದಾಗ ಲಕ್ಷ್ಮಿಯು ಅಷ್ಟೇ ಮುದ್ದಿನಿಂದ ಊಂ ... ಇಲ್ಲ ಸರ್ ಪ್ರಾಕ್ಟಿಸ್ ಮಾಡಿಲ್ಲ ಎಂದು ರಾಗ ಎಳೆಯುತ್ತಾಳೆ .  ತಕ್ಷಣವೇ ಪ್ರೊಫೆಸರ್ ಒಂದು ಚಾನ್ಸ್ ತಗೊಳೋ  ಬಂಗಾರ , ಕೇಳಲು ಗಾಯನ ಇಂಪಾಗಿದ್ದರೆ  ಸಾಕು ಕಣೋ ಎಂದು ಮುದ್ದಿನಿಂದ ಹೇಳಿದಾಗ ಹೂಂ ಎಂದು ಒಪ್ಪುತ್ತಾಳೆ  ಲಕ್ಷ್ಮಿ.   

                                                             ಮುಂದುವರಿಯುವುದು ..............

Saturday, 24 November 2012



LEPAKSHI

 Lepakshi, a distance of about 25 km via Hindupur....


There are three temples dedicated to Shiva, Vishnu and Virabhadra. On a hillock known as Kurma Saila (tortoise shaped hill), temples of 'Papanatheswara', 'Raghunatha', 'Srirama', 'Veerabhadra' and 'Durga' are located. Veerabhadra temple is the most important temple.


VIDURASHWATHA







VIDURASHWATHA 
.










It's about 120km from Bangalore on the way to Hyderabad......  reached up to Chikkaballapura, Gouri Bidanur and proceeded to a small place, about 8Km from there to a village Vidurashwatha, . place with lot of Ashwatha and neem trees......



Nagana Kallu

a small temple with large compound with thousands of serpent stones (nagana kallu)...... placed in by devotees...... who believed that their family will be blessed with children..... people were worshiping individually placed stones and quite few devotees sitting and offering prayers..... It's believed that Ashwtha is a male tree and Neem is female tree and there are occasions to celebrate the wedding between these two trees........ much required oxygen given out by these trees is very good for humans and can cause physiological changes in the body for better health..



The name Vidurashwatha is derived from that of a big Ashwatha (Ficus religiosa) tree located in this village. According to a legend of the times of Mahabharata, this tree was planted by Vidura, a courtier in the kingdom of Dhritarashtra; and hence the name Vidurashwatha Unfortunately, in 2001, this ancient tree fell to the ground


ಪ್ರೇಮಾಮೃತ ---------------------5

                           









    ಪ್ರೇಮಾಮೃತ ---------------------5


ಕಾಲೇಜಿಗೂ  ಮತ್ತು ಲಕ್ಷ್ಮಿಯ ಮನೆಗೂ ಬಹಳ ದೂರವಾದುದರಿಂದ , ಮೊದಲನೆಯ ದಿನವೇ ಕ್ಲಾಸಿಗೆ ಹತ್ತು ನಿಮಿಷ ತಡವಾಗಿ ಬಂದ ಲಕ್ಷ್ಮಿಯನ್ನು ಅನಂತಮೂರ್ತಿ ಕೆಮಿಸ್ಟ್ರಿ ಅದ್ಯಾಪಕರು ,ನಾಳೆಯಿಂದ ಸರಿಯಾದ ಸಮಯಕ್ಕೆ ಕ್ಲಾಸಿಗೆ ಬರಬೇಕೆಂದು ಆಜ್ಞಾಪಿಸಿದಾಗ , ಸಾರೀ ಸರ್  ಎಂದು ನಗುತ್ತಾಳೆ .  ಇಡೀ ತರಗತಿಯಲ್ಲಿಯೇ ಅತೀ ಸುಂದರ ಹಾಗೂ ಮುದ್ದಾಗಿರುವ ಮತ್ತು ಚಿಕ್ಕವಳಾದ ಲಕ್ಷ್ಮಿಯ ಮಾತನ್ನು ಹುಡುಗಿಯರೆಲ್ಲ ಮೆಚ್ಚುತ್ತಾರೆ .  ಮರುದಿನ ಕಾಲೇಜಿನಲ್ಲಿ ತನ್ನ ತರಗತಿಗೆ ಹೋಗುತ್ತಿರುವಾಗ ಒಳ್ಳೆ ಬಿಳೀ ಬಣ್ಣದ ಅತ್ಯಂತ ಸುಂದರವಾದ ಯುವಕ ಅಂದರೆ ಅನಂತ್ ಅದ್ಯಾಪಕರು ನಡೆಯುವಾಗ ಅವರಿಗೆ ಮುಂಚೆಯೇ ಓಡಿ  ಹೋಗಿ  ತನ್ನ ಜಾಗವನ್ನು ಆವರಿಸಿಕೊಂಡ ಲಕ್ಷ್ಮಿಯನ್ನು ನೋಡಿ ಮುಗುಳ್ನಗುತ್ತ, ಎಲ್ಲರಿಗೂ ಗೂಡ್ಮಾರ್ನಿಂಗ್  ಎಂದು ಹೇಳಿ ಪಾಠವನ್ನು ಆರಂಭಿಸುತ್ತಾರೆ .  ಅಂದಿನಿಂದ ತರಗತಿಯಲ್ಲಿ ಪಾಠಗಳು ಸಾಂಗವಾಗಿ ನಡೆಯಲು ಶುರುವಾಗುತ್ತದೆ .  ಆದರೆ ಲಕ್ಷ್ಮಿ ಮಾತ್ರ ಬಸ್ಸಿನ ಅಭಾವದಿಂದ ಪ್ರತಿದಿನವೂ ಐದು ಹತ್ತು ನಿಮಿಷಗಳು ತಡವಾಗಿ ಬಂದು ತರಗತಿಯಲ್ಲಿ ಲೇಟ್ ಲತೀಫ್ ಎಂಬ ಹೆಸರಿನಿಂದ ಪ್ರಸಿದ್ಧಿಯಾಗುತ್ತಾಳೆ .  ಎರಡನೆಯ ಪೀರಿಯಡ್ ನಲ್ಲಿಅದ್ಯಾಪಕರುಬರಲಿಲ್ಲವಾದಕಾರಣ,ತರಗತಿಯಲ್ಲಿ ಬಹಳ ಗಲಾಟೆ ನಡೆಯುತ್ತಿರುತ್ತದೆ .ಪ್ರೊಫೆಸರ್ ದೀಪಕರಾಜ್ ಬಂದು ಅತ್ಯಂತ ಗಂಭೀರವಾಗಿ ದಯವಿಟ್ಟು ಗಲಾಟೆ ಮಾಡಬೇಡಿ , ಬೇರೆ ತರಗತಿಯವರಿಗೆ ತೊಂದರೆಯಾಗುತ್ತದೆ ಎಂದು ಬುದ್ದಿ ಹೇಳಿ ಹೋಗುತ್ತಾರೆ.
ಮಾರನೆ ದಿವಸ ಅದೇ ತರಗತಿ ಅಂದರೆ ಮೊದಲನೇ ಪಿ.ಯು.ಸಿ.ತರಗತಿಯಲ್ಲಿ ಅದ್ಯಾಪಕರು ರಜವಿದ್ದ ಕಾರಣ ತರಗತಿಯಲ್ಲಿ ಬರೀ ವಿದ್ಯಾರ್ಥಿಗಳೇ ಇದ್ದರೂ ಕೂಡ ಸದ್ದೇ ಇಲ್ಲದಿದ್ದುದನ್ನು ಕಂಡ ಪ್ರೊಫೆಸರ್ ನೋಡೋಣವೆಂದು ತರಗತಿಯಹತ್ತಿರ ಬಂದಾಗ ಅತ್ಯಂತ ಮಧುರವಾದ ಕೋಕಿಲ ಕಂಠದಿಂದ  ಹಿಂದಿ ಚಲನಚಿತ್ರದ ಹಾಡು "ಸಾಯೋನಾರ ಸಾಯೋನಾರ"ಎಂದು ಕೇಳಿ ಬರುತ್ತಿರುತ್ತದೆ.

                                                   ಮುಂದುವರಿಯುವುದು .................

Saturday, 17 November 2012

PREMAAMRUTA-----------4

                            










                                  ಪ್ರೇಮಾ ಮೃತ-------4


ಸುಮಾರು  ಸಂಜೆ  ಐದು  ಘಂಟೆಹೊತ್ತಿಗೆಲಕ್ಷ್ಮಿಯತಂದೆನಾರಾಯಣರಾಯರು  ಮತ್ತು  ತಾಯಿ  ಶಾಂತಾದೇವಿ ಯವರು  ಮೈಸೂರ್  ನಿಂದ  ವಾಪಸ್ಸು  ಬರುತ್ತಾರೆ .  ಲಕ್ಷ್ಮಿಯು  ತನ್ನ  ತಂದೆಯ  ತೊಡೆಯಮೇಲೆ  ಮುದ್ದಿನಿಂದ  ಕುಳಿತುಕೊಂಡು  ಅಪ್ಪ , ಎಂದು  ಬೆಳಿಗ್ಗೆಯಿಂದ  ನಡೆದ  ವಿಷಯವನ್ನು  ಎಡೆಬಿಡದೆ  ವಿವರಿಸುತ್ತಾಳೆ .  ದೀಪು  ಮತ್ತು  ನರಸಮ್ಮನವರು  ಬಂದುಹೋಗಿದ್ದು  ಮತ್ತು  ಲಕ್ಷ್ಮಿಯು  ಅಪರಿಚಿತರಾದ  ಅವರುಗಳಿಗೆ  ಮಾಡಿದ ಆತಿತ್ಯವನ್ನು  ಕೇಳಿ  ಆಶ್ಚರ್ಯ ಪಡುತ್ತಾರೆ  ಹಾಗೆಯೇ  ತಮ್ಮ  ಪ್ರೀತಿಯ  ಮಡದಿಗೆ  ನೋಡಿದ್ರಾ  ಶಾಂತಮ್ಮನವರೇ  ನಾವಿಲ್ಲದಾಗ  ನಮ್ಮ ಮಗಳ ಕಾರ್ಬಾರನ್ನು  ಎಂದು ಛೇಡಿಸುತ್ತಾರೆ . ಮರುದಿನ  ಬೆಳಿಗ್ಗೆ  ಲಕ್ಷ್ಮಿಯ  ಪರೀಕ್ಷೆಯ  ಫಲಿತಾಂಶವನ್ನು  ನೋಡಿದ  ರಾಯರಿಗೆ  ಮತ್ತು ಶಾಂತಮ್ಮನವರಿಗೆ  ಆದ ಆನಂದ ಅಷ್ಷ್ಟಿಷ್ಟಲ್ಲ .  ರಾಯರು , ಲಕ್ಷ್ಮಿಯು ಇಷ್ಟ ಪಟ್ಟಂತ ಜ್ಞಾನಾಮೃತ  ಕಾಲೇಜಿಗೆ   ಲಕ್ಷ್ಮಿಯನ್ನು ಸೇರಿಸಲು, ಅರ್ಜಿಯನ್ನು ಪಡೆಯಲು   ಲಕ್ಷ್ಮಿಯೊಂದಿಗೆ  ಕಾಲೇಜಿನ  ಅರ್ಜಿಯನ್ನು  ಸ್ವೀಕರಿಸುವ ವಿಭಾಗದ ಸಾಲಿನಲ್ಲಿ  ನಿಂತಿರುತ್ತಾರೆ .  ತುಂಬಾ ದೂರವಿದೆಯಲ್ಲ  ಕಾಲೇಜು , ಮಗುಹೇಗೆಇಷ್ಟುದೂರಬರುತ್ತದೆಎಂದುಒಳಗೊಳಗೇಚಿಂತಿಸುತ್ತಿರುತ್ತಾರೆರಾಯರು  .  ತುಂಬಾ ಬಿಸಿಲಾದ್ದರಿಂದ  ಲಕ್ಷ್ಮಿಯು ತನ್ನ ಚೂಡಿದಾರ್ ಮೇಲಿದ್ದ ವೇಲ್ ಅನ್ನು  ಬಿಸಿಲು ತಾಗದಂತೆ ತಲೆಯಮೇಲೆ  ಹೊದ್ದಿಕೊಂಡು   ನಿಂತಿರುತ್ತಾಳೆ .  ಇದ್ದಕ್ಕಿದ್ದಂತೆ  ಹಲೋ  ನನ್ನ  ನೆನಪಿದೆಯೇ  ಎಂದು ನಗುತ್ತ ಕೇಳುತ್ತಿದ್ದಂತೆಯೇ , ಲಕ್ಷ್ಮಿಯು ಅತ್ಯಾಶ್ಚರ್ಯ ದಿಂದ ಅರ್ರೆ  ಅಂಕಲ್  ನೀವಿಲ್ಲಿ? ಎಂದು ಒಂದು ನಿಮಿಷ ಬೆರಗಾಗುತ್ತಾಳೆ ನಂತರ    ತನ್ನ ತಂದೆಗೆ ದೀಪುವನ್ನು ಪರಿಚಯಿಸುತ್ತಾಳೆ . ಬನ್ನಿ ಸಾರ್ ಎಂದು ದೀಪುವು ಅವರುಗಳನ್ನುಕರೆದೊಯ್ದು  ಕಾಲೇಜಿನ  ಲ್ಯಾಬ್ ಗಳು  ಮತ್ತು ಶಿಕ್ಷಕರ ಕೊಠಡಿಗಳನ್ನೆಲ್ಲಾ  ತೋರಿಸುತ್ತಾ  ಇದೇ  ನನ್ನ ಸೀಟ್  ಎಂದು  ಮತ್ತು ಆ ಕಡೆ ಇದ್ದ ಬೇರೆ ಪ್ರಾದ್ಯಾಪಕರುಗಳಾದ  ಅನಂತಮೂರ್ತಿ ಮತ್ತು ಕೃಷ್ಣಮೂರ್ತಿ ಎಲ್ಲರನ್ನು ಪರಿಚಯ ಮಾಡುವಷ್ಟರಲ್ಲಿ ಲಕ್ಷ್ಮಿಯು ಟೇಬಲ್ ಮೇಲಿದ್ದ" ಪ್ರೊಫೆಸರ್  ದೀಪಕ್ ರಾಜ್" ಎಂಬ ಬೋರ್ಡ್ ನೋಡಿ ಆಶ್ಚರ್ಯದಿಂದ ತಲೆ ತಗ್ಗಿಸಿ ಸಾರಿ ಸಾರ್ ತುಂಬಾಸಲಿಗೆಯಿಂದ ನಾನು  ಮಾತನಾಡಿದೆ ಎಂದು ನಿಂತಾಗ, ಸುಮ್ಮನಿರೋ ಪುಟ್ಟ  ಎಂದು ಅವಳಗಲ್ಲ ಹಿಡಿದು ತಲೆ ಎತ್ತಿ ಮುದ್ದಿನಿಂದ ತಲೆ ಸವರುತ್ತಾನೆ ದೀಪು.. ರಂಗಪ್ಪ ಎಂದು ಕರೆದು ಅವನ ಹತ್ತಿರ ಅರ್ಜಿಯನ್ನು ತರಿಸಿ  ಭರ್ತಿಮಾಡುವಂತೆ  ಲಕ್ಷ್ಮಿಗೆ ತಿಳಿಸುತ್ತಾನೆ ದೀಪು .  ನಂತರ ನಾರಾಯಣರಾಯರ ಬಳಿ  ಅಡ್ಮಿಶನ್  ಗೆ ಹಣವನ್ನು  ತೆಗೆದುಕೊಂಡು ಅರ್ಜಿಯಮೇಲೆ  ತನ್ನರುಜು ವನ್ನು ಮಾಡಿ ಇದಕ್ಕೆ ರಶೀತಿ ಹಾಕಿಸಿಕೊಂಡು ಬಾ ಎಂದು ರಂಗಪ್ಪನೊಂದಿಗೆ ಕಳುಹಿಸಿಕೊಡುತ್ತಾನೆ .  ರಶೀತಿಯನ್ನು ರಾಯರಿಗೆ ಕೊಟ್ಟು ಅವರುಗಳನ್ನು ಬೀಳ್ಕೊಡುತ್ತಾರೆ  ಪ್ರೊಫೆಸರ್  ದೀಪಕ್  ರಾಜ್ .

                                                                                          ಮುಂದುವರಿಯುವುದು ..................................

Saturday, 10 November 2012

ಇ 2012ರ ದೀಪಾವಳಿಯು ನಿಮ್ಮೆಲ್ಲರಿಗು






 2012ರ  ದೀಪಾವಳಿಯು  ನಿಮ್ಮೆಲ್ಲರಿಗು 
                      ಆಯುರ್  ಐಶ್ವೆರ್ಯ  ಆರೋಗ್ಯಭಾಗ್ಯ 
                                    ಎಲ್ಲವನ್ನು  ದೇವರು  ಕೂಡಲೆಂದು ಪ್ರಾರ್ಥಿಸುತ್ತೇನೆ 

ಪ್ರೇ ಮಾ ಮೃ ತ ---------3

                                         











                                                                 ಪ್ರೇ ಮಾ ಮೃ ತ  ---------3


ಸರಿ  ನಾವಿನ್ನು  ಬರೋಣವೇ  ಅಂತ  ಎದ್ದಾಗ  ಆಂಟಿ  ನನಗೆ  ಕಾಫಿ  ಮಾಡಲು ಬರುವುದಿಲ್ಲ , ಬೇಕಾದರೆ  ಹಾರ್ಲಿಕ್ಕ್ಸ್  ಮಾಡಿಕೊಡುತ್ತೇನೆ  ಎಂದು  ಎಲ್ಲರಿಗೂ 
ತಂದುಕೊಡುತ್ತಾಳೆ  ಲಕ್ಷ್ಮಿ.  ದೀಪು  ಲಕ್ಷ್ಮಿಯನ್ನು  ಪಾಪು  ಬಾ ಇಲ್ಲಿ  ಎಂದು  ಕರೆದು ಚಿಕ್ಕ ಮಗುವಿನಂತೆ  ಪಕ್ಕದಲ್ಲಿ  ಕೂರಿಸಿಕೊಂಡು ಒಂದು  ಮಾತು ನೋಡು ,  ನಾನು  ನಿನ್ನನ್ನು ಎಲ್ಲೊ  ಏಳೆಂಟು  ವರುಷದ  ಹುಡುಗಿ  ಅಂದು ಕೊಂಡಿದ್ದೆ .  ಆದರೆ ನೀನೀಗ  ಕಾಲೇಜಿಗೆ  ಹೋಗುವ ಹುಡುಗಿ .  ಹೀಗೆಲ್ಲಾ  ಇರಬಾರದು  ಎಂದ ತಕ್ಷಣ  ಅವಳು ಎದ್ದು ಒಳಗೆ ಹೋಗಿ  ಎರಡೇ  ನಿಮಿಷದಲ್ಲಿ  ಕನಕಾಂಬರ  ಬಣ್ಣದ ತುಂಬುತೋಳಿನ ಚೂಡಿಧಾರ್  ಧರಿಸಿ , ಹಣೆಗೆ  ಕೆಂಪುಬಣ್ಣದ  ತಿಲಕವಿಟ್ಟು ಕೈಗೆ ಬಳೆತೊಟ್ಟು  ಕಿವಿಗೆ ಲೋಲಕ್  ಹಾಕಿ ಬಾಬ್ ಕಟ್   ನಿಂದ  ಬಂದ  ಲಕ್ಷ್ಮಿಯನ್ನು ನೋಡಿ  ಬೆರಗಾದರು  ದೀಪೂ  ಹಾಗೂ  ನರಸಮ್ಮನವರು . ಅತ್ಯಂತ  ಸಂತಸದಿಂದ ಒಳ್ಳೆ ಹುಡುಗಿ  ಎಂದು  ತಲೆಯಮೇಲೆ  ಮುದ್ದಿನಿಂದ  ತಟ್ಟಿ  ಹೊರಟುನಿಲ್ಳುತ್ತಾರೆ .  ಅಷ್ಟರಲ್ಲಿ  ದೇವರ ಮನೆಯಿಂದ  ಕುಂಕುಮದ ಬಟ್ಟಲು , ಅದರೊಂದಿಗೆ  ಒಂದು ತಟ್ಟೆಯಲ್ಲಿ  ಎಲೆ ಅಡಿಕೆ  ಮತ್ತು  ಸೇಬು  ಹಣ್ಣಿನೊಂದಿಗೆ  ಬಂದ  ಲಕ್ಷ್ಮಿ , ಆಂಟಿ , ಕುಂಕುಮ  ಇಟ್ಟುಕೊಳ್ಳಿ  ಎಂದಾಗ , ನಾನು  ಕುಂಕುಮ ಇಟ್ಟುಕೊಳ್ಳುವಂತಿಲ್ಲ  ಮಗೂ  ಎಂದು  ಹಣ್ಣನ್ನು  ಮಾತ್ರ  ತೆಗೆದುಕೊಂಡು , ಚಿಕ್ಕಮಗು  ನೀನು  ಪರವಾಗಿಲ್ಲ   ಎಂದು  ಪ್ರೀತಿಯಿಂದ  ಅವಳ  ತಲೆಯನ್ನು  ಸವರಿ  ದೇವರು  ನಿನ್ನನ್ನು  ಚೆನ್ನಾಗಿಟ್ಟಿರಲಿ  ಎಂದು  ಹಾರೈಸಿ  ಹೊರಡುತ್ತಾರೆ .
ಅವರುಗಳನ್ನು  ಬೀಳ್ಕೊಟ್ಟು  ಒಳಗೆಬಂದು  ಬಾಗಿಲು  ಹಾಕಿಕೊಳ್ಳುತ್ತಾಳೆ  ಲಕ್ಷ್ಮಿ .

                                                         ಮುಂದುವರಿಯುವುದು -------------

ಎಲ್ಲರಿಗು ದೀಪಾವಳಿಯ ಶುಭಾಷಯಗಳು



   ಎಲ್ಲರಿಗು ದೀಪಾವಳಿಯ ಶುಭಾಷಯಗಳು 







ದೀಪಾವಳಿಯ ಆಚರಣೆಯ ಹಿಂದೆ ಪ್ರಸಿದ್ಧ ದಂತಕಥೆಇದೆ  ಭಗವಾನ್ ಶ್ರೀ ರಾಮ ಅಯೋಧ್ಯಾ ನಗರದ  ರಾಜಕುಮಾರ ಇವರ ತಂದೆ   ದಶರಥ ಮಹಾರಾಜ .  ಶ್ರೀ  ರಾಮ್ತ  ತಂದೆಯ  ಸೂಚನೆಗಳ ಪ್ರಕಾರ ಕಾಡಿನಲ್ಲಿ ತಂಗಿದ್ದರು ಕಾ ಡಿನಲ್ಲಿ, ರಾಮನ ಪತ್ನಿಯಾದ ಸೀತಾ ಮಾತೆಯನ್ನು - ಲಂಕಾಧೀಶ  ರಾವಣ ಅಪಹರಿಸಿದನು .  ರಾವಣನ  ಬಂಧನದಲ್ಲಿ ಇದ್ದ   ಸೀತಾ ಮಾತೆಯ ಸಲುವಾಗಿ ರಾಮ   ಲಂಕಧಿಶನಾದ  ರಾವಣನ ಮೇಲೆ   ಯುದ್ಧ ಮಾಡಿದ , ಇದರಲ್ಲಿ, ರಾಮ  ರಾವಣನನ್ನೂ  ಸೋಲಿಸಿ   ತನ್ನ ಪತ್ನಿ ಸೀತೆ ಜೊತೆಗೆ ಶ್ರೀ  ರಾಮ ಅಯೋಧ್ಯೆಯನ್ನು  ತಲುಪಿದಾಗ, ಅಯೋಧ್ಯೆಯ ಜನರು ತಮ್ಮ ಅಚ್ಚುಮೆಚ್ಚಿನ ರಾಜಕುಮಾರ ಶ್ರೀ ರಾಮ ಮತ್ತು  ಸೀತಾದೇವಿಯನ್ನು  ಸ್ವಾಗತಿಸುವ ಸಲುವಾಗಿ ಎಲ್ಲಾರ  ಮನೆಯಲ್ಲಿ  ದೀಪಗಳಿಂದ  ಅಯೋಧ್ಯೆಯ  ನಗರವು  ಅಲಂಕರಿಸಲಾಗಿತ್ತು.ಆದುದರಿಂದ ದೀಪಾವಳಿಯ ದಿವಸ  ಎಲ್ಲರ ಮನೆಯಲ್ಲಿಯೂ ದೀಪಗಳಿಂದ  ಅಲಂಕರಿಸುತ್ತಾರೆ

ORIGIN OF DEEPAVLI STORY OF BALI CHAKRAVARTHIOR VAMANA AVATARA

Sunday, 4 November 2012

ಪ್ರೇ ಮಾಮೃ ತ -2

                                                             







Thursday, 1 November 2012

ಸಮಸ್ತ ಬಾಂಧವರುಗಳಿಗೆಲ್ಲ ಕರ್ನಾಟಕ ರಾಜ್ಯೋತ್ಸವದ ಶುಭಾಷಯಗಳು










 ಕಾವೇರಿ  ಕಾಲ್ತೋಳೆಯೇ  ಕಾದಿರುವಳೂ ....
 ಗೊದಾವರೀದೇವಿ   ಹೂಮುಡಿವಳೂ ......
 ಒಡಲೆಲ್ಲ ಸಿಂಗರಿಸೆ  ತುಂಗೆ ಇವಳೂ ....
 ಒಡನಾಡೆ ಭದ್ರೆತಾ ಜತೆಗಿರುವಳೂ ......

 ಕನ್ನಡದ  ಕಸ್ತೂರಿ  ತಿಲಕವಿಟ್ಟೂ .........
 ಕನ್ನಡದ ಕಾವ್ಯಗಳ  ಮಾಲೆ ತೊಟ್ಟು .......
 ಕನ್ನಡದ  ಕಾಲ್ಗೆಜ್ಜೆ  ನಾದಕೊಟ್ಟು ........
 ಹೊನ್ನುಡಿಯ  ಭೂಮಿಯಲಿ  ಹೆಜ್ಜಇಟ್ಟು .......
 ಬಾತಾಯಿ  ಭಾರತಿಯೇ  ಬಾವಭಾಗೀರತಿಯೇ ....


ಈ  ಸಾಲುಗಳನ್ನು  ಓದಿದರೆ ನಮ್ಮ  ಕರ್ನಾಟಕದ ಬಗ್ಗೆ  ಎಷ್ಟು  ಹೆಮ್ಮೆ  ಎನಿಸುತ್ತದಲ್ಲವೇ ......


ಇದನ್ನು ಬರೆದ  ಕವಿಗಳಿಗೆ  ನಮ್ಮ  ನಮನ
                   
                       ಸಮಸ್ತ  ಬಾಂಧವರುಗಳಿಗೆಲ್ಲ   ಕರ್ನಾಟಕ  ರಾಜ್ಯೋತ್ಸವದ ಶುಭಾಷಯಗಳು


                                                                                                         ಲತಾ ಜಗದೀಶ

ಎಲ್ಲರಿಗು 2012 ರ ಕನ್ನಡ ರಾಜ್ಯೋತ್ಸವದ ಶುಭಾಷಯಗಳು






ಎಲ್ಲರಿಗು 2012 ರ  ಕನ್ನಡ ರಾಜ್ಯೋತ್ಸವದ  ಶುಭಾಷಯಗಳು 




ಭಾರತ ಗಣರಾಜ್ಯ ಮತ್ತು ರಾಜ್ಯಗಳ ರಚನೆಯಾದ ನಂತರ, ಮೈಸೂರು ದಕ್ಷಿಣ ಭಾರತದ ರಾಜ್ಯಗಳಲ್ಲಿ ಒಂದಾಯಿತು.
  ಆದರೆ ಉತ್ತರ ಮತ್ತು ಹೈದರಾಬಾದ್ ಕರ್ನಾಟಕ ಪ್ರದೇಶದ ಜನರುಮೈಸೂರು ಹೆಸರನ್ನು   ಸ್ವೀಕರಿಸುವುದಿಲ್ಲ ಮತ್ತು ಹೆಸರು ಬದಲಾವಣೆಗೆ ಒತ್ತಾಯಿಸಿದರು
  ಸುದೀರ್ಘ ಚರ್ಚೆಯ ನಂತರ ರಾಜ್ಯದ ಹೆಸರು ನವೆಂಬರ್ 1, 1973 ರಂದು ಕರ್ನಾಟಕ ಎಂದು ಬದಲಾಯಿಸಲಾಯಿತು.

ಅಧಿಕೃತವಾಗಿ ಹೊಸ ರಾಜ್ಯದ ನವೆಂಬರ್ 1 ರಂದು ಜನಿಸಿತು  ಮತ್ತು ಈ ದಿನ ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವ ಎಂದು ಆಚರಿಸಲಾಗುತ್ತದೆ.
  ರಾಜ್ಯೋತ್ಸವ   ಎಂದರೆ  "ಒಂದು ರಾಜ್ಯದ ಜನ್ಮ" ಎಂದರ್ಥ.