Saturday, 17 November 2012

PREMAAMRUTA-----------4

                            










                                  ಪ್ರೇಮಾ ಮೃತ-------4


ಸುಮಾರು  ಸಂಜೆ  ಐದು  ಘಂಟೆಹೊತ್ತಿಗೆಲಕ್ಷ್ಮಿಯತಂದೆನಾರಾಯಣರಾಯರು  ಮತ್ತು  ತಾಯಿ  ಶಾಂತಾದೇವಿ ಯವರು  ಮೈಸೂರ್  ನಿಂದ  ವಾಪಸ್ಸು  ಬರುತ್ತಾರೆ .  ಲಕ್ಷ್ಮಿಯು  ತನ್ನ  ತಂದೆಯ  ತೊಡೆಯಮೇಲೆ  ಮುದ್ದಿನಿಂದ  ಕುಳಿತುಕೊಂಡು  ಅಪ್ಪ , ಎಂದು  ಬೆಳಿಗ್ಗೆಯಿಂದ  ನಡೆದ  ವಿಷಯವನ್ನು  ಎಡೆಬಿಡದೆ  ವಿವರಿಸುತ್ತಾಳೆ .  ದೀಪು  ಮತ್ತು  ನರಸಮ್ಮನವರು  ಬಂದುಹೋಗಿದ್ದು  ಮತ್ತು  ಲಕ್ಷ್ಮಿಯು  ಅಪರಿಚಿತರಾದ  ಅವರುಗಳಿಗೆ  ಮಾಡಿದ ಆತಿತ್ಯವನ್ನು  ಕೇಳಿ  ಆಶ್ಚರ್ಯ ಪಡುತ್ತಾರೆ  ಹಾಗೆಯೇ  ತಮ್ಮ  ಪ್ರೀತಿಯ  ಮಡದಿಗೆ  ನೋಡಿದ್ರಾ  ಶಾಂತಮ್ಮನವರೇ  ನಾವಿಲ್ಲದಾಗ  ನಮ್ಮ ಮಗಳ ಕಾರ್ಬಾರನ್ನು  ಎಂದು ಛೇಡಿಸುತ್ತಾರೆ . ಮರುದಿನ  ಬೆಳಿಗ್ಗೆ  ಲಕ್ಷ್ಮಿಯ  ಪರೀಕ್ಷೆಯ  ಫಲಿತಾಂಶವನ್ನು  ನೋಡಿದ  ರಾಯರಿಗೆ  ಮತ್ತು ಶಾಂತಮ್ಮನವರಿಗೆ  ಆದ ಆನಂದ ಅಷ್ಷ್ಟಿಷ್ಟಲ್ಲ .  ರಾಯರು , ಲಕ್ಷ್ಮಿಯು ಇಷ್ಟ ಪಟ್ಟಂತ ಜ್ಞಾನಾಮೃತ  ಕಾಲೇಜಿಗೆ   ಲಕ್ಷ್ಮಿಯನ್ನು ಸೇರಿಸಲು, ಅರ್ಜಿಯನ್ನು ಪಡೆಯಲು   ಲಕ್ಷ್ಮಿಯೊಂದಿಗೆ  ಕಾಲೇಜಿನ  ಅರ್ಜಿಯನ್ನು  ಸ್ವೀಕರಿಸುವ ವಿಭಾಗದ ಸಾಲಿನಲ್ಲಿ  ನಿಂತಿರುತ್ತಾರೆ .  ತುಂಬಾ ದೂರವಿದೆಯಲ್ಲ  ಕಾಲೇಜು , ಮಗುಹೇಗೆಇಷ್ಟುದೂರಬರುತ್ತದೆಎಂದುಒಳಗೊಳಗೇಚಿಂತಿಸುತ್ತಿರುತ್ತಾರೆರಾಯರು  .  ತುಂಬಾ ಬಿಸಿಲಾದ್ದರಿಂದ  ಲಕ್ಷ್ಮಿಯು ತನ್ನ ಚೂಡಿದಾರ್ ಮೇಲಿದ್ದ ವೇಲ್ ಅನ್ನು  ಬಿಸಿಲು ತಾಗದಂತೆ ತಲೆಯಮೇಲೆ  ಹೊದ್ದಿಕೊಂಡು   ನಿಂತಿರುತ್ತಾಳೆ .  ಇದ್ದಕ್ಕಿದ್ದಂತೆ  ಹಲೋ  ನನ್ನ  ನೆನಪಿದೆಯೇ  ಎಂದು ನಗುತ್ತ ಕೇಳುತ್ತಿದ್ದಂತೆಯೇ , ಲಕ್ಷ್ಮಿಯು ಅತ್ಯಾಶ್ಚರ್ಯ ದಿಂದ ಅರ್ರೆ  ಅಂಕಲ್  ನೀವಿಲ್ಲಿ? ಎಂದು ಒಂದು ನಿಮಿಷ ಬೆರಗಾಗುತ್ತಾಳೆ ನಂತರ    ತನ್ನ ತಂದೆಗೆ ದೀಪುವನ್ನು ಪರಿಚಯಿಸುತ್ತಾಳೆ . ಬನ್ನಿ ಸಾರ್ ಎಂದು ದೀಪುವು ಅವರುಗಳನ್ನುಕರೆದೊಯ್ದು  ಕಾಲೇಜಿನ  ಲ್ಯಾಬ್ ಗಳು  ಮತ್ತು ಶಿಕ್ಷಕರ ಕೊಠಡಿಗಳನ್ನೆಲ್ಲಾ  ತೋರಿಸುತ್ತಾ  ಇದೇ  ನನ್ನ ಸೀಟ್  ಎಂದು  ಮತ್ತು ಆ ಕಡೆ ಇದ್ದ ಬೇರೆ ಪ್ರಾದ್ಯಾಪಕರುಗಳಾದ  ಅನಂತಮೂರ್ತಿ ಮತ್ತು ಕೃಷ್ಣಮೂರ್ತಿ ಎಲ್ಲರನ್ನು ಪರಿಚಯ ಮಾಡುವಷ್ಟರಲ್ಲಿ ಲಕ್ಷ್ಮಿಯು ಟೇಬಲ್ ಮೇಲಿದ್ದ" ಪ್ರೊಫೆಸರ್  ದೀಪಕ್ ರಾಜ್" ಎಂಬ ಬೋರ್ಡ್ ನೋಡಿ ಆಶ್ಚರ್ಯದಿಂದ ತಲೆ ತಗ್ಗಿಸಿ ಸಾರಿ ಸಾರ್ ತುಂಬಾಸಲಿಗೆಯಿಂದ ನಾನು  ಮಾತನಾಡಿದೆ ಎಂದು ನಿಂತಾಗ, ಸುಮ್ಮನಿರೋ ಪುಟ್ಟ  ಎಂದು ಅವಳಗಲ್ಲ ಹಿಡಿದು ತಲೆ ಎತ್ತಿ ಮುದ್ದಿನಿಂದ ತಲೆ ಸವರುತ್ತಾನೆ ದೀಪು.. ರಂಗಪ್ಪ ಎಂದು ಕರೆದು ಅವನ ಹತ್ತಿರ ಅರ್ಜಿಯನ್ನು ತರಿಸಿ  ಭರ್ತಿಮಾಡುವಂತೆ  ಲಕ್ಷ್ಮಿಗೆ ತಿಳಿಸುತ್ತಾನೆ ದೀಪು .  ನಂತರ ನಾರಾಯಣರಾಯರ ಬಳಿ  ಅಡ್ಮಿಶನ್  ಗೆ ಹಣವನ್ನು  ತೆಗೆದುಕೊಂಡು ಅರ್ಜಿಯಮೇಲೆ  ತನ್ನರುಜು ವನ್ನು ಮಾಡಿ ಇದಕ್ಕೆ ರಶೀತಿ ಹಾಕಿಸಿಕೊಂಡು ಬಾ ಎಂದು ರಂಗಪ್ಪನೊಂದಿಗೆ ಕಳುಹಿಸಿಕೊಡುತ್ತಾನೆ .  ರಶೀತಿಯನ್ನು ರಾಯರಿಗೆ ಕೊಟ್ಟು ಅವರುಗಳನ್ನು ಬೀಳ್ಕೊಡುತ್ತಾರೆ  ಪ್ರೊಫೆಸರ್  ದೀಪಕ್  ರಾಜ್ .

                                                                                          ಮುಂದುವರಿಯುವುದು ..................................

No comments:

Post a Comment