Friday, 30 November 2012

ಪ್ರೇಮಾಮೃತ--------೬













                                   ಪ್ರೇಮಾಮೃತ--------೬

ಹೊರಗಡೆಯೇ  ನಿಂತು ಪೂರ್ತಿಯಾಗಿ ಹಾಡನ್ನು ಕೇಳಿದಮೇಲೆ ,ಒಳಗೆ ಬಂದರೆ , ಸುತ್ತಲೂ ಹುಡುಗಿಯರು ಸದ್ದಿಲ್ಲದೇ ಕುಳಿತಿದ್ದು , ಮೇಜಿನ ಮೇಲೆ ಮದ್ಯದಲ್ಲಿ ಕುಳಿತು ಲಕ್ಷ್ಮಿಯು ಹಾಡುತ್ತಿದ್ದ ಹಾಡನ್ನುಅತ್ಯಂತ ತಲ್ಲೀನತೆಯಿಂದ ತುಂಬಾ ಖುಷಿಯಾಗಿ  ಆಲಿಸುತ್ತಿದ್ದುದನ್ನು ಕಂಡ ಪ್ರೊಫೆಸರ್ ಗೆ ಒಂದುನಿಮಿಷ
ಆಶ್ಚರ್ಯವೇ ಆಗುತ್ತದೆ.  ಅವರು ತಕ್ಷಣವೇ ಹಠತ್ತಾಗಿ ಯಾರು ಹಾಡುತ್ತಿದ್ದುದು ? ಎಂದಾಗ ಎಲ್ಲರೂ ಹೆದರಿ ತಲೆತಗ್ಗಿಸಿ ನಿಲ್ಲುತ್ತಾರೆ. ಆಗ   ನೀವಾಗಿ ನೀವು ೧೨.೩೦ ಘಂಟೆಗೆ ಕ್ಲಾಸ್ ಮುಗಿದ ಮೇಲೆ ಪ್ರಾದ್ಯಾಪಕರ ಕೊಠಡಿಗೆ ಬಂದರೆ ಸರಿ ಎಂದು ಗಡುಸು ದ್ವನಿಯಿಂದ ಹೇಳಿ  ವಾಪಸ್ಸು ಹೋಗುತ್ತಾರೆ.ಕ್ಲಾಸ್ ಮುಗಿದ ನಂತರ ಲಕ್ಷ್ಮಿಯು ಪ್ರಾದ್ಯಾಪಕರು ಎಲ್ಲಿ ಬಯ್ಯುತ್ತಾರೋ ಎಂದು ಹೆದರಿ ಹೆದರಿ ೧೨-೩೦ಘಂಟೆಗೆ ಸರಿಯಾಗಿ ಪ್ರಾದ್ಯಾಪಕರ ಕೊಠಡಿ ಯೊಳಗೆ ಅಪ್ಪಣೆ ಪಡೆದು ಬಂದು ಕಣ್ಣಲ್ಲಿ ನೀರು ತುಂಬಿಕೊಂಡು ನಿಂತು  ಕ್ಷಮಿಸಿ ಸಾರ್ , ಇನ್ನೆಂದೂ ಹೀಗೆ ಮಾಡಲ್ಲ ಎಂದು ನಡುಗುತ್ತಾ ಹೇಳುತ್ತಾಳೆ .  ಅವಳನ್ನು ನೋಡಿ ಪ್ರಾದ್ಯಾಪಕರು ಮುಗುಳ್ನಗುತ್ತಾ , ಮಗೂ ನಾನು ನಿನ್ನನ್ನು ಬಯ್ಯಲು ಕರೆಯಲಿಲ್ಲಮ್ಮ ಎಂದು ಪ್ರೀತಿಯಿಂದ ಹೇಳಿ ಅಲ್ಲಿನೋಡು  ಎಂದಾಗ ಅಲ್ಲಿ ಗಂಭಿರವಾಗಿ ನಗುತ್ತ ಪ್ರೊಫೆಸರ್ ದೀಪಕ್ ರಾಜ್ ರವರು ಕುಳಿತಿರುತ್ತಾರೆ. ಅವನು ಅವಳನ್ನು ನಗುತ್ತಾ ಬಾ ಇಲ್ಲಿ ಕುಳಿತುಕೋ ಎಂದು ತನ್ನ ಪಕ್ಕದಲ್ಲಿದ್ದ ಕುರ್ಚಿಯಲ್ಲಿ  ಕೂರಲು ಆಜ್ಞಾಪಿಸುತ್ತಾನೆ.  ಏ ಪುಟ್ಟು, ನಾಳೆ ದಿವಸ  ಕಲಾಕ್ಷೇತ್ರದಲ್ಲಿ ಇಂಟರ್ ಕಾಲೇಜ್ ವಿವಿಧರೀತಿಯ ಸಾಂಸ್ಕೃತಿಕ ಸ್ಪರ್ಧೆ ನಡೆಯಲಿದೆ . ನೀನು ಭಾಗವಹಿಸುವೆಯ? ಎಂದು ಮುದ್ದಿನಿಂದ ಕೇಳಿದಾಗ ಲಕ್ಷ್ಮಿಯು ಅಷ್ಟೇ ಮುದ್ದಿನಿಂದ ಊಂ ... ಇಲ್ಲ ಸರ್ ಪ್ರಾಕ್ಟಿಸ್ ಮಾಡಿಲ್ಲ ಎಂದು ರಾಗ ಎಳೆಯುತ್ತಾಳೆ .  ತಕ್ಷಣವೇ ಪ್ರೊಫೆಸರ್ ಒಂದು ಚಾನ್ಸ್ ತಗೊಳೋ  ಬಂಗಾರ , ಕೇಳಲು ಗಾಯನ ಇಂಪಾಗಿದ್ದರೆ  ಸಾಕು ಕಣೋ ಎಂದು ಮುದ್ದಿನಿಂದ ಹೇಳಿದಾಗ ಹೂಂ ಎಂದು ಒಪ್ಪುತ್ತಾಳೆ  ಲಕ್ಷ್ಮಿ.   

                                                             ಮುಂದುವರಿಯುವುದು ..............

No comments:

Post a Comment