Saturday, 10 November 2012

ಪ್ರೇ ಮಾ ಮೃ ತ ---------3

                                         











                                                                 ಪ್ರೇ ಮಾ ಮೃ ತ  ---------3


ಸರಿ  ನಾವಿನ್ನು  ಬರೋಣವೇ  ಅಂತ  ಎದ್ದಾಗ  ಆಂಟಿ  ನನಗೆ  ಕಾಫಿ  ಮಾಡಲು ಬರುವುದಿಲ್ಲ , ಬೇಕಾದರೆ  ಹಾರ್ಲಿಕ್ಕ್ಸ್  ಮಾಡಿಕೊಡುತ್ತೇನೆ  ಎಂದು  ಎಲ್ಲರಿಗೂ 
ತಂದುಕೊಡುತ್ತಾಳೆ  ಲಕ್ಷ್ಮಿ.  ದೀಪು  ಲಕ್ಷ್ಮಿಯನ್ನು  ಪಾಪು  ಬಾ ಇಲ್ಲಿ  ಎಂದು  ಕರೆದು ಚಿಕ್ಕ ಮಗುವಿನಂತೆ  ಪಕ್ಕದಲ್ಲಿ  ಕೂರಿಸಿಕೊಂಡು ಒಂದು  ಮಾತು ನೋಡು ,  ನಾನು  ನಿನ್ನನ್ನು ಎಲ್ಲೊ  ಏಳೆಂಟು  ವರುಷದ  ಹುಡುಗಿ  ಅಂದು ಕೊಂಡಿದ್ದೆ .  ಆದರೆ ನೀನೀಗ  ಕಾಲೇಜಿಗೆ  ಹೋಗುವ ಹುಡುಗಿ .  ಹೀಗೆಲ್ಲಾ  ಇರಬಾರದು  ಎಂದ ತಕ್ಷಣ  ಅವಳು ಎದ್ದು ಒಳಗೆ ಹೋಗಿ  ಎರಡೇ  ನಿಮಿಷದಲ್ಲಿ  ಕನಕಾಂಬರ  ಬಣ್ಣದ ತುಂಬುತೋಳಿನ ಚೂಡಿಧಾರ್  ಧರಿಸಿ , ಹಣೆಗೆ  ಕೆಂಪುಬಣ್ಣದ  ತಿಲಕವಿಟ್ಟು ಕೈಗೆ ಬಳೆತೊಟ್ಟು  ಕಿವಿಗೆ ಲೋಲಕ್  ಹಾಕಿ ಬಾಬ್ ಕಟ್   ನಿಂದ  ಬಂದ  ಲಕ್ಷ್ಮಿಯನ್ನು ನೋಡಿ  ಬೆರಗಾದರು  ದೀಪೂ  ಹಾಗೂ  ನರಸಮ್ಮನವರು . ಅತ್ಯಂತ  ಸಂತಸದಿಂದ ಒಳ್ಳೆ ಹುಡುಗಿ  ಎಂದು  ತಲೆಯಮೇಲೆ  ಮುದ್ದಿನಿಂದ  ತಟ್ಟಿ  ಹೊರಟುನಿಲ್ಳುತ್ತಾರೆ .  ಅಷ್ಟರಲ್ಲಿ  ದೇವರ ಮನೆಯಿಂದ  ಕುಂಕುಮದ ಬಟ್ಟಲು , ಅದರೊಂದಿಗೆ  ಒಂದು ತಟ್ಟೆಯಲ್ಲಿ  ಎಲೆ ಅಡಿಕೆ  ಮತ್ತು  ಸೇಬು  ಹಣ್ಣಿನೊಂದಿಗೆ  ಬಂದ  ಲಕ್ಷ್ಮಿ , ಆಂಟಿ , ಕುಂಕುಮ  ಇಟ್ಟುಕೊಳ್ಳಿ  ಎಂದಾಗ , ನಾನು  ಕುಂಕುಮ ಇಟ್ಟುಕೊಳ್ಳುವಂತಿಲ್ಲ  ಮಗೂ  ಎಂದು  ಹಣ್ಣನ್ನು  ಮಾತ್ರ  ತೆಗೆದುಕೊಂಡು , ಚಿಕ್ಕಮಗು  ನೀನು  ಪರವಾಗಿಲ್ಲ   ಎಂದು  ಪ್ರೀತಿಯಿಂದ  ಅವಳ  ತಲೆಯನ್ನು  ಸವರಿ  ದೇವರು  ನಿನ್ನನ್ನು  ಚೆನ್ನಾಗಿಟ್ಟಿರಲಿ  ಎಂದು  ಹಾರೈಸಿ  ಹೊರಡುತ್ತಾರೆ .
ಅವರುಗಳನ್ನು  ಬೀಳ್ಕೊಟ್ಟು  ಒಳಗೆಬಂದು  ಬಾಗಿಲು  ಹಾಕಿಕೊಳ್ಳುತ್ತಾಳೆ  ಲಕ್ಷ್ಮಿ .

                                                         ಮುಂದುವರಿಯುವುದು -------------

No comments:

Post a Comment