Saturday, 24 November 2012

ಪ್ರೇಮಾಮೃತ ---------------------5

                           









    ಪ್ರೇಮಾಮೃತ ---------------------5


ಕಾಲೇಜಿಗೂ  ಮತ್ತು ಲಕ್ಷ್ಮಿಯ ಮನೆಗೂ ಬಹಳ ದೂರವಾದುದರಿಂದ , ಮೊದಲನೆಯ ದಿನವೇ ಕ್ಲಾಸಿಗೆ ಹತ್ತು ನಿಮಿಷ ತಡವಾಗಿ ಬಂದ ಲಕ್ಷ್ಮಿಯನ್ನು ಅನಂತಮೂರ್ತಿ ಕೆಮಿಸ್ಟ್ರಿ ಅದ್ಯಾಪಕರು ,ನಾಳೆಯಿಂದ ಸರಿಯಾದ ಸಮಯಕ್ಕೆ ಕ್ಲಾಸಿಗೆ ಬರಬೇಕೆಂದು ಆಜ್ಞಾಪಿಸಿದಾಗ , ಸಾರೀ ಸರ್  ಎಂದು ನಗುತ್ತಾಳೆ .  ಇಡೀ ತರಗತಿಯಲ್ಲಿಯೇ ಅತೀ ಸುಂದರ ಹಾಗೂ ಮುದ್ದಾಗಿರುವ ಮತ್ತು ಚಿಕ್ಕವಳಾದ ಲಕ್ಷ್ಮಿಯ ಮಾತನ್ನು ಹುಡುಗಿಯರೆಲ್ಲ ಮೆಚ್ಚುತ್ತಾರೆ .  ಮರುದಿನ ಕಾಲೇಜಿನಲ್ಲಿ ತನ್ನ ತರಗತಿಗೆ ಹೋಗುತ್ತಿರುವಾಗ ಒಳ್ಳೆ ಬಿಳೀ ಬಣ್ಣದ ಅತ್ಯಂತ ಸುಂದರವಾದ ಯುವಕ ಅಂದರೆ ಅನಂತ್ ಅದ್ಯಾಪಕರು ನಡೆಯುವಾಗ ಅವರಿಗೆ ಮುಂಚೆಯೇ ಓಡಿ  ಹೋಗಿ  ತನ್ನ ಜಾಗವನ್ನು ಆವರಿಸಿಕೊಂಡ ಲಕ್ಷ್ಮಿಯನ್ನು ನೋಡಿ ಮುಗುಳ್ನಗುತ್ತ, ಎಲ್ಲರಿಗೂ ಗೂಡ್ಮಾರ್ನಿಂಗ್  ಎಂದು ಹೇಳಿ ಪಾಠವನ್ನು ಆರಂಭಿಸುತ್ತಾರೆ .  ಅಂದಿನಿಂದ ತರಗತಿಯಲ್ಲಿ ಪಾಠಗಳು ಸಾಂಗವಾಗಿ ನಡೆಯಲು ಶುರುವಾಗುತ್ತದೆ .  ಆದರೆ ಲಕ್ಷ್ಮಿ ಮಾತ್ರ ಬಸ್ಸಿನ ಅಭಾವದಿಂದ ಪ್ರತಿದಿನವೂ ಐದು ಹತ್ತು ನಿಮಿಷಗಳು ತಡವಾಗಿ ಬಂದು ತರಗತಿಯಲ್ಲಿ ಲೇಟ್ ಲತೀಫ್ ಎಂಬ ಹೆಸರಿನಿಂದ ಪ್ರಸಿದ್ಧಿಯಾಗುತ್ತಾಳೆ .  ಎರಡನೆಯ ಪೀರಿಯಡ್ ನಲ್ಲಿಅದ್ಯಾಪಕರುಬರಲಿಲ್ಲವಾದಕಾರಣ,ತರಗತಿಯಲ್ಲಿ ಬಹಳ ಗಲಾಟೆ ನಡೆಯುತ್ತಿರುತ್ತದೆ .ಪ್ರೊಫೆಸರ್ ದೀಪಕರಾಜ್ ಬಂದು ಅತ್ಯಂತ ಗಂಭೀರವಾಗಿ ದಯವಿಟ್ಟು ಗಲಾಟೆ ಮಾಡಬೇಡಿ , ಬೇರೆ ತರಗತಿಯವರಿಗೆ ತೊಂದರೆಯಾಗುತ್ತದೆ ಎಂದು ಬುದ್ದಿ ಹೇಳಿ ಹೋಗುತ್ತಾರೆ.
ಮಾರನೆ ದಿವಸ ಅದೇ ತರಗತಿ ಅಂದರೆ ಮೊದಲನೇ ಪಿ.ಯು.ಸಿ.ತರಗತಿಯಲ್ಲಿ ಅದ್ಯಾಪಕರು ರಜವಿದ್ದ ಕಾರಣ ತರಗತಿಯಲ್ಲಿ ಬರೀ ವಿದ್ಯಾರ್ಥಿಗಳೇ ಇದ್ದರೂ ಕೂಡ ಸದ್ದೇ ಇಲ್ಲದಿದ್ದುದನ್ನು ಕಂಡ ಪ್ರೊಫೆಸರ್ ನೋಡೋಣವೆಂದು ತರಗತಿಯಹತ್ತಿರ ಬಂದಾಗ ಅತ್ಯಂತ ಮಧುರವಾದ ಕೋಕಿಲ ಕಂಠದಿಂದ  ಹಿಂದಿ ಚಲನಚಿತ್ರದ ಹಾಡು "ಸಾಯೋನಾರ ಸಾಯೋನಾರ"ಎಂದು ಕೇಳಿ ಬರುತ್ತಿರುತ್ತದೆ.

                                                   ಮುಂದುವರಿಯುವುದು .................

No comments:

Post a Comment