ಪ್ರೇ ಮಾಮೃ ತ -2
ದೀಪು ನೀನೂ ಸ್ವಲ್ಪ ತಗೊಳ್ಲೂ ಎಂದಾಗ , ಅಂಟಿ ಅಂಕಲ್ ಗೆ ನಾನೇ ತಂದು ಕೊಡುತ್ತೀನಿ ಇರಿ ಎಂದು ಓಡಿಹೋಗಿ ಅವನಿಗೂ ಒಂದು ತಟ್ಟೆಯಲ್ಲಿ ಬಿಸಿಬೇಳೆಬಾತ್ ಮತ್ತು ಜಾಮೂನನ್ನು ತಂದುಕೊಡು ತ್ತಾಳೆ ಲಕ್ಷ್ಮಿ . ನಿನ್ನ ತಂದೆತಾಯಿ ಎಲ್ಲಿ ಮಗೂ ಎಂದು ನರಸಮ್ಮನವರು ಕೇಳಿದಾಗ , ಮಮ್ಮಿ ಮತ್ತು ಡ್ಯಾಡಿ ಮೈಸೂರಿಗೆ ಮದುವೆಗೆ ಬೆಳಿಗ್ಗೆ ಆರು ಘಂಟೆಗೆ ಹೋದರು ಆಂಟಿ ಸಂಜೆಗೆ ಬಂದುಬಿಡುತ್ತಾರೆ ಎನ್ನುತ್ತಾಳೆ ಚಿಕ್ಕ ಶಾರ್ಟ್ಸ್ ಮತ್ತು ತೋಳಿಲ್ಲದ ಟೀ ಶರ್ಟ್ ಧರಿಸಿದ್ದ ಮುದ್ದುಮುದ್ದಾಗಿರುವ ಲಕ್ಷ್ಮಿ . ನೀನು ಏನು ಓದುತ್ತೀದ್ದೀಯ ? ಎಂದು ಕೇಳಿದ ದೀಪುವಿಗೆ , ನಾನು ಹತ್ತನೇ ತರಗತಿ ಪರೀಕ್ಷೆ ಬರೆದಿದ್ದೀನಿ ಅಂಕಲ್ ಅನ್ನುತ್ತಾಳೆ . ಓ ಹಾಗಾದರೆ ನಾಳೆ ರಿಸಲ್ಟ್ ಅಲ್ವಾ ಎಂದು ತುಂಟತನದಿಂದ ಮುಖದಲ್ಲಿ ಹುಸುನಗೆ ಬೀರುತ್ತಾನೆ ದೀಪು. ಎಷ್ಟು ಪರ್ ಸೆಂಟ್ ಬರಬಹುದು ? ಯಾವ ಕಾಲೇಜ್ ಸೇರಬೇಕೆಂದಿದ್ದೀಯ ಎಂದೆಲ್ಲ ಪ್ರಶ್ನಿಸುತ್ತಾನೆ . ನೋಡಬೇಕು ಅಂಕಲ್ ಜ್ಞಾನಾ ಮೃ ತ ಕಾಲೇಜ್ ಸೇರಬೇಕು ಅಂತ ಆಸೆ . ಆದರೆ ಡ್ಯಾಡಿ ತುಂಬಾ ದೂರ ಅಂತಾರೆ . ಅಂಕಲ್ ಅಲ್ಲಿ ಒಬ್ಬರು ದೀಪಕ್ ರಾಜ್ ಅಂತ ಪ್ರೊಫೆಸರ್ ಇದ್ದಾರಂತೆ . ಅವರು ಬಾಟನಿ , ಜುಆಲಜಿ ಎಲ್ಲಾ ಚೆನ್ನಾಗಿ ಪಾಠ ಮಾಡುತ್ತಾರಂತೆ . ಅವರು ತುಂಬಾ ದೊಡ್ಡ ವ್ಯಕ್ತಿಯಂತೆ .ಅವರ ಪಾಠ ಕೇಳಿದರೆ ಡಾಕ್ಟರ್ ಆಗುವುದು ಖಂಡಿತವಂತೆ . ನನಗೂ ಡಾಕ್ಟರ್ ಆಗಬೇಕೆಂಬ ಆಸೆ . ಅಂಕಲ್ ಅಂಕಲ್, ನಾನು ಡಾಕ್ಟರ್ ಆದರೆ ನನ್ನ ಆಸ್ಪತ್ರೆಯಲ್ಲಿ ಮಹಿಳೆಯರಿಗೆಲ್ಲ ಉಚಿತ ಪರೀಕ್ಷೆ ಎಂದು ಪಟ ಪಟ ಅಂತ ಅರಳುಹುರಿದಂತೆ ಮಾತನಾಡುತ್ತ , ನಾನೂ ತುಂಬಾ ದೊಡ್ಡ ಡಾಕ್ಟರ್ಆಗುತ್ತೀನಿ ಎಂದು ಮುಗ್ದ ಮನಸ್ಸಿನಿಂದ ಹೇಳುತ್ತಾಳೆ ಲಕ್ಷ್ಮಿ.. ಅಷ್ಟು ದೂರದ ಕಾಲೇಜ್ ಗೆ ಹೇಗೆ ಹೋಗುತ್ತೀಯ ಎಂದಾಗ ನನ್ನ ಹತ್ತಿರ ವೆಹಿಕಲ್ ಇದೆ ಅಂಕಲ್ ಎನ್ನುತ್ತಾಳೆ . ಯಾವ ವೆಹಿಕಲ್ ಎಂದುದಕ್ಕೆ ಲೂನ ಎಂದಾಗ ನಾನೆಲ್ಲೋ ಕಾರೋ ಬೈಕೋ ಇದೆಯೇನೋ ಅಂತಿದ್ದೆ ಎಂದು ಜೋರಾಗಿ ನಗುತ್ತಾ ಛೇ ಡಿಸುತ್ತಾನೆ . ಲಕ್ಷ್ಮಿಯ ಮುದ್ದುಮುದ್ದಾದ ಮಾತನ್ನು ಕೇಳುತ್ತಿದ್ದ ನರಸಮ್ಮನವರಿಗೆ ಒಳಗೊಳಗೇ ಆನಂದವಾಗುತ್ತದೆ ........................
ಮುಂದುವರಿಯುವುದು
No comments:
Post a Comment