ಹೂಸ ವರ್ಷದ ಶುಭಾಶಯಗಳು ೨೦೧೩
Monday, 31 December 2012
Saturday, 29 December 2012
ಪ್ರೇಮಾಮೃತ -----------10
ಪ್ರೇಮಾಮೃತ -----------10
ಅರ್ಧ ಘಂಟೆಯ ನಂತರ ಪ್ರೊಫೆಸರ್ ಕಾರ್ ಬಂದ ತಕ್ಷಣವೇ ಕಾರನ್ನು ಹತ್ತಿ ಗುಡ್ ಮಾರ್ನಿಂಗ್ ಸರ್ ಎಂದು ಹೇಳಿದಳು ಲಕ್ಷ್ಮಿ . ಹಸಿರು ಮತ್ತು ಕೆಂಪು ಬಣ್ಣದ ರೇಷ್ಮೆ ಚೂಡಿದಾರ್ ನಲ್ಲಿದ್ದ ಲಕ್ಷ್ಮಿಯು ಅತ್ಯಂತ ಸುಂದರವಾಗಿ ಮುದ್ದುಮುದ್ದಾಗಿ ಕಾಣಿಸುತ್ತಿದ್ದಳು. ಪುಟ್ಟು, ಇಂದಿನ ಸ್ಪರ್ಧೆಗೆ ತಯಾರಿ ಜೋರಾಗೇ ಇದ್ದ ಹಾಗಿದೆ ಎಂದು ತುಂಟತನದಿಂದ ಛೇಡಿಸುತ್ತಾನೆ . ಕಾಲೇಜಿಗೆ ಹೋಗುವ ದಾರಿಯಲ್ಲಿ ಒಂದು ದೇವಸ್ತಾನದ ಹತ್ತಿರ ಕಾರು ನಿಲ್ಲಿಸಿ , ದೇವರಿಗೆ ನಮಸ್ಕರಿಸಿ , ಅಲ್ಲಿಯೇ ಒಂದು ಗಾಡಿಯಲ್ಲಿ ಎಳನೀರು ಮಾರುತ್ತಿರುವುದನ್ನು ಕಂಡು, ಇಬ್ಬರೂ ಎಳನೀರನ್ನು ಕುಡಿದು ಕಾಲೇಜಿಗೆ ಮುಂದುವರಿಯುತ್ತಾರೆ . ಕಾಲೇಜಿನಲ್ಲಿ ಪ್ರೊಫೆಸರ್ ತನ್ನ ಜವಾಬ್ದಾರಿಯುತ ಕೆಲಸವನ್ನು ಬೇರೊಬ್ಬರಿಗೆ ವಹಿಸಿ , ಲಕ್ಷ್ಮಿಗೆ ಅವಳ ಕ್ಲಾಸ್ ಟೀಚರ್ ಹತ್ತಿರ ಅಟೆಂಡೆನ್ಸ್ ಹಾಕಿಸಿ ಇಬ್ಬರೂ ಸುಮಾರು ಎಂಟು ಮುಕ್ಕಾಲು ಘಂಟೆಗೆ ಕಾಲೇಜಿನಿಂದ ಸ್ಪರ್ಧೆ ನಡೆಯುವ ಸ್ಥಳವಾದ ಕಲಾಕ್ಷೇತ್ರಕ್ಕೆ ಹೊರಡುತ್ತಾರೆ .ಅಲ್ಲಿ ತಲುಪಿದಾಕ್ಷಣವೇ ದೀಪಕ್ ಲಕ್ಷ್ಮಿಯ ಹೆಸರನ್ನು ದಾಖಲಿಸಿ ಅವಳಿಗೆ ಬೆಸ್ಟ್ ಆಫ್ ಲಕ್ ತಿಳಿಸಿ ನಾನಿನ್ನು ಬರುತ್ತೇನೆ ಎಂದು ಹೊರಡುತ್ತಾನೆ.
ಮುಂದುವರಿಯುವುದು -------------
Thursday, 27 December 2012
Tuesday, 25 December 2012
Monday, 24 December 2012
Sunday, 23 December 2012
VAIKUNTA EKAADASI PROGRAMMES AT SRI VENKATESHWARA TEMPLE AT MUDDINAPALYA
VAIKUNTA EKAADASI PROGRAMMES AT SRI VENKATESHWARA TEMPLE AT MUDDINAPALYA
SHREE MAATAAMRUTA KALAA VRUNDA
Friday, 21 December 2012
ಪ್ರೇಮಾಮೃತ -------------9
ಪ್ರೇಮಾಮೃತ -------------9
ಬೆಳಿಗ್ಗೆ ಆರು ಘಂಟೆಗೆ ಸರಿಯಾಗಿ ಬಸ್ಸುನಿಲ್ದಾಣಕ್ಕೆ ಹೋಗಿ ನಿಂತ ಲಕ್ಷ್ಮಿಗೆ , ಆರು ಘಂಟೆ ಹತ್ತು ನಿಮಿಷವಾದರೂ ಬಸ್ಸು ಬರದೇ ಇದ್ದಾಗ ಗಾಬರಿಗೊಂಡು, ಹಿಂದಿನ ದಿನ ಪ್ರೊಫೆಸರ್ ಕೊಟ್ಟಿದ್ದ ಮೊಬೈಲ್ ನಂಬರ್ ಗೆ ಫೋನ್ ಮಾಡುತ್ತಾಳೆ. ಬಚ್ಚಲು ಮನೆಯಲ್ಲಿ ಅರ್ಧ ಶೇವ್ ಮಾಡಿಕೊಳ್ಳುತ್ತಿದ್ದ ದೀಪಕ್ , ಲಕ್ಷ್ಮಿಯ ನಂಬರ್ ನೋಡಿದೊಡನೆ, ಯಾಕೋ ಮರೀ ಏನಾಯ್ತೋ ಎನ್ನುತ್ತಾನೆ. ಅದಕ್ಕೆ ಲಕ್ಷ್ಮಿಯು , ಪ್ರೊಫೆಸರ್ ಸರ್ ,ಇವತ್ತು ಇನ್ನೂ ಬಸ್ಸೇ ಬಂದಿಲ್ಲ ಎಂದಾಗ, ಹೋಗಲಿ ಬಿಡು ಮರಿ ಚಿಂತೆ ಮಾಡಬೇಡ ನಾನೇ ಬಂದು ಕರೆದುಕೊಂಡು ಹೋಗುತ್ತೀನಿ ಎನ್ನುತ್ತಾನೆ . ಧನ್ಯವಾದಗಳು ಸರ್ ಎಂದು ಫೋನ್ ಕಟ್ ಮಾಡಿದ ತಕ್ಷಣವೇ ಬಸ್ಸು ಬರುತ್ತಿರುವುದು ದೂರದಿಂದಲೇ ಕಾಣುತ್ತಿರುತ್ತದೆ. ಮತ್ತೆ ಸರ್ ಗೆ ಫೋನ್ ಮಾಡಿ , ಸಂತಸ ಮತ್ತು ಉದ್ವೇಗದಿಂದ ಮುದ್ದು ಮುದ್ದಾಗಿ , ಪ್ರೊಫೆಸರ್ ಸರ್, ಪ್ರೊಫೆಸ್ಸರ್ ಸರ್ , ಬಸ್ಸು ಬಂದಿತು ಎಂದು ಅನ್ನುತ್ತಾಳೆ . ಆಯ್ತು ಮರಿ ಬಸ್ಸಿನಲ್ಲಿ ಬಂದು, ಬೇಕರಿ ಬಸ್ ನಿಲ್ದಾಣದ ಹತ್ತಿರ ಇರು , ಅಲ್ಲಿಂದ ನಾನು ಕರೆದು ಕೊಂಡು ಹೋಗುತ್ತೀನಿ ಎಂದು ಹೇಳಿ ಫೋನ್ ಕಟ್ ಮಾಡುತ್ತಾನೆ ದೀಪು. ಅಲ್ಲಿಂದ ಹೋರಟ ಬಸ್ಸು ಎರಡು ಮೂರು ಸ್ಟಾಪ್ ಹೋಗುತ್ತಿದ್ದಂತೆ ಕೆಟ್ಟು ಹೋಗುತ್ತದೆ. ಮತ್ತೆ ಲಕ್ಷ್ಮಿಯು ಆತಂಕ ಮತ್ತು ಸಂಕೋಚದಿಂದ ಸರ್ ಗೆ ಫೋನ್ ಮಾಡಿ ಸರ್ , ಬಸ್ಸು ಕೆಟ್ಟು ಹೋಯಿತು , ಇಲ್ಲಿ ಆಟೋ ಕೂಡ ಇಲ್ಲ ಎಂದು ಪೆಚ್ಚಾಗಿ ನುಡಿದಾಗ , ಏನೋ ಪುಟ್ಟ ಇವತ್ತು ಬೆಳಿಗ್ಗೆ ಯಿಂದ ನಿನ್ನ ಗಲಾಟೆ ಎಂದು ಮುದ್ದಿನಿಂದ, ಸ್ನಾನ ಮಾಡಲೂ ಬಿಡಲ್ಲವಲ್ಲೋ ಮರಿ ಎಂದು , ಈಗ ಎಲ್ಲಿದ್ದಿ ಎಂದು ಕೇಳಿ , ಸರಿ ಅಲ್ಲೇ ಇರು , ಇನ್ನು ಅರ್ಧ ಘಂಟೆ ಯಲ್ಲಿ ನಾನೇ ಬಂದು ಕರೆದು ಕೊಂದು ಹೋಗುತ್ತೀನಿ ಅನ್ನುತ್ತಾನೆ. ಧನ್ಯವಾದಗಳು ಸರ್ ಎಂದು ಫೋನ್ ಕಟ್ ಮಾಡುತ್ತಾಳೆ ಲಕ್ಷ್ಮಿ.
ಮುಂದುವರಿಯುವುದು .......................
Wednesday, 19 December 2012
ಪ್ರೇಮಾಮೃತ----------8
ಪ್ರೇಮಾಮೃತ-----------8
ಲಕ್ಷ್ಮಿಗೆ ಬಸ್ಸು ಸಿಕ್ಕಿ ಮನೆಗೆ ಬರುವಷ್ಟರಲ್ಲಿ , ಅವಳು ದಿನಾ ಬರುವ ಸಮಯಕ್ಕೆ ಮನೆಗೆ ಬರದಿದ್ದ ಕಾರಣ ಅವಳ ಅಮ್ಮ ಆತಂಕದಿಂದ ಹೊರಗೆ ಒಳಗೆ ಸುತ್ತಾಡುತ್ತಿದ್ದರು. ಲಕ್ಷ್ಮಿಯನ್ನು ನೋಡಿದೊಡನೆ ಅವರಿಗೆ ಆದ ಸಂತೋಷ ಅಷ್ಟಿಷ್ಟಲ್ಲ . ಸದ್ಯ ಬಂದ್ಯಲ್ಲ. ನನಗೆ ಯಾಕೋ ಬರಲಿಲ್ಲವಲ್ಲಪ್ಪ, ಕಾಲೇಜ್ ಬೇರೆ ತುಂಬಾ ದೂರ ಅಂತ ಚಿಂತೆ ಯಾಗಿತ್ತು ಅಂತ ಮಗಳೊಂದಿಗೆ ತಮ್ಮ ಮನಸ್ಸಿನ ಗೊಂದಲವನ್ನು ತೋಡಿಕೊಂಡರು ಶಾಂತಮ್ಮನವರು.
ಲಕ್ಷ್ಮಿಯು ತನ್ನ ಅಮ್ಮನಿಗೆ ,ಅಮ್ಮ ಇವತ್ತು ಕಾಲೇಜಿನಲ್ಲಿ ಎಂದು ನಡೆದ ವಿಷಯವನ್ನೆಲ್ಲ ತಿಳಿಸಿ , ನಮ್ಮ ಪ್ರೊಫೆಸರ್ ಸರ್ ತುಂಬಾ ಒಳ್ಳೆಯವರು ಎಂದು , ಅವರಿಗೆ ಕೆಟ್ಟದ್ದು ಅಂದರೆ ಗೊತ್ತೇ ಇಲ್ಲ. ವಿಧ್ಯಾರ್ಥಿ ಗಳನ್ನೆಲ್ಲಾ ಎಷ್ಟು ಮುದ್ದಿನಿಂದ ಮಾತನಾಡಿಸುತ್ತಾರೆ , ಅವರು ಮಾಡುವ ಪಾಠವಂತೂ ಹೇಳತೀರದು ಎಂದೆಲ್ಲ ಅವರನ್ನು ಗುಣಗಾನ ಮಾಡಿದಳು .. ನಾನು ತುಂಬಾ ಅದೃಷ್ಟವಂತೆ ಮಮ್ಮಿ, ಅಂಥ ಪ್ರೊಫೆಸರ್ 'ನ ವಿಧ್ಯಾರ್ಥಿ ಯಾಗಲು ಎಂದೆಲ್ಲ ಅತ್ಯಂತ ಸಂತಸದಿಂದ ಬಡಬಡ ಅಂತ ಒಂದೇಸಮನೆ ಮಾತನಾಡುತ್ತಿದ್ದಳು. ಲಕ್ಷ್ಮಿ ನೀನು ಬರಿ ನಿಮ್ಮ ಪ್ರೊಫೆಸರ್ ನ ಹೊಗಳುತ್ತಿರುವೆಯೋ ಅಥವಾ ಊಟಮಾಡುವಿಯೋ ಎಂದು ಛೇ ಡಿಸುತ್ತಿದ್ದರು ಶಾಂತಮ್ಮನವರು . ರಾತ್ರಿ ಊಟ ಮಾಡುವಾಗ ಮಮ್ಮಿ ಬೆಳಿಗ್ಗೆ ನಾಲಕ್ಕು ಘಂಟೆ ಗೆ ಎಬ್ಬಿಸು . ಕಾಲೇಜ್ ಗೆ ಸರಿಯಾದ ಸಮಯಕ್ಕೆ ಹೋಗಬೇಕು , ಎಂದವಳು , ರಾತ್ರಿ ಇಡೀ ನಿದ್ರೆ ಯೇ ಇಲ್ಲದೆ ಬೇಗ ಎದ್ದು ತಯಾರಾಗಿ , ಹಾಡಿನ ಕ್ಯಾಸೆಟ್ ಡ್ಯಾನ್ಸ್ ಗಾಗಿ , ಮತ್ತು ಡ್ಯಾನ್ಸ್ ಡ್ರೆಸ್ ಎಲ್ಲಾ ತೆಗೆದುಕೊಂಡು ಬಹಳ ಅಚ್ಚುಕಟ್ಟಾಗಿ , ಡ್ಯಾನ್ಸ್ ಗೆ ಬೇಕಾದಂತೆ ಕಿವಿಗೆ ವಾಲೆ ಜುಮುಕಿ , ಕೈ ತುಂಬಾ ಮಿಣಮಿಣ ಅಂತ ಬಳೆಗಳನ್ನು ತೊಟ್ಟು ಸಂಭ್ರಮದಿಂದ ಬೆಳಿಗ್ಗೆ ಆರು ಘಂಟೆ ಯ ಬಸ್ಸಿಗೆಂದು ಹೊರಡುತ್ತಾಳೆ ಲಕ್ಷ್ಮಿ.
ಮುಂದುವರಿಯುವುದು................ .................
Saturday, 15 December 2012
Saturday, 8 December 2012
ಪ್ರೇಮಾಮೃತ ------- -೭
ಪ್ರೇಮಾಮೃತ ----------------೭
ಮಧ್ಯಾನ್ಹದ ವೇಳೆಯಲ್ಲಿ ಬಸ್ಸಿನ ಅಭಾವವಾದ್ದರಿಂದ, ಲಕ್ಷ್ಮಿಯು ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಾ ಒಬ್ಬಳೇ ಕುಳಿತಿದ್ದಳು. ಒಂದು ಬಿಳಿಯ ಬಣ್ಣದ ಕಾರು ಮುಂದೆ ಹೋಗಿ ಹಿಂದಕ್ಕೆ ವಾಪಸ್ಸು ಬಂದಿದ್ದನ್ನು ನೋಡಿ ಗಾಭಾರಿಯಾದಳು . ಓಯ್ ಯಾಕೋ ರಾಜ ,ಬಸ್ಸು ಸಿಕ್ಕಲಿಲ್ಲವೇನೋ ? ಬಾ ನಾನು ಹೇಗೂ ಡೈರೆಕ್ಟರ್ ಆಫೀಸ್ ಗೆ ಹೋಗುತ್ತೀದ್ದೀನಿ ಅಲ್ಲಿ ತನಕ ನಿನ್ನನ್ನೂ ಬಿಟ್ಟು ಹೋಗುತ್ತೀನಿ ಎಂದಾಗ ಪ್ರೊಫೆಸರ್ ದ್ವನಿ ಕೇಳಿದಾಗ ಗಾಭರಿಯಾಗಿದ್ದ ಲಕ್ಷ್ಮಿಗೆ ಸ್ವಲ್ಪ ನೆಮ್ಮದಿ ಆಯಿತು. ಆದರೂ ಸಂಕೋಚದಿಂದ ಪರವಾಗಿಲ್ಲ ಸಾರ್ ಎನ್ನುತ್ತಾಳೆ. ಯಾಕೋ ಪುಟ್ಟ ಭಯ ಏನೋ ಅಂದಾಗ ,ಹಾಗೇನಿಲ್ಲ ಸರ್ ಎಂದು ಕಾರನ್ನು ಹತ್ತುತ್ತಾಳೆ ಲಕ್ಷ್ಮಿ. ನಂತರ ದೀಪಕ್, ಬೆಳಿಗ್ಗೆ ನಿಮ್ಮ ಮನೆಯ ಹತ್ತಿರ ಬಸ್ಸು ಎಷ್ಟು ಹೊತ್ತಿಗೆ ಇದೆ . ನಾಳೆ ೮.೩೦ಗೆ ಸರಿಯಾಗಿ ನೀನು ಕಾಲೇಜಿನಲ್ಲಿ ಇರಬೇಕು. ಅದಕ್ಕೆ ಆಯ್ತು ಸಾರ್ ಅನ್ನುತ್ತಾಳೆ . ನಾಳೆ ನೀನು ದೇವರನಾಮದ ಸ್ಪರ್ಧೆ ಗೆ ಯಾವ ಹಾಡು ಹೇಳುತ್ತೀ ? ವಾತಾಪಿ ಹೇಳೋ ಅಂದಾಗ , ಹೋಗಿ , ಪ್ರೊಫೆಸರ್ ಸರ್ ಅದನ್ನು ಎಲ್ಲರೂ ಹೇಳುತ್ತಾರೆ ಅಂದಾಗ ಆದರೇನು ಅದು ತುಂಬಾ ರಿಚ್ ಹಾಡು ಎನ್ನುತ್ತಾನೆ . ಸರಿ ಭಾವಗೀತೆಗೆ /ನಾಡಗೀತೆಗೆ ಯಾವ ಹಾಡು ಎಂದುದಕ್ಕೆ ಜೋಗದಸಿರಿಬೇಳಕಿನಲ್ಲಿ ಬಿ ಆರ್ ಛಾಯ ಅವರು ಹಾಡಿದ್ದಾರಲ್ಲ , ಅದನ್ನು ಹಾಡುತ್ತೇನೆ ಎಂದುದಕ್ಕೆ ನಕ್ಕು, ಜನಪದಗೀತೆ ಎಂದಾಗ ಇನ್ನೂ ಯೋಚಿಸಿಲ್ಲಾ ಅನ್ನುತ್ತಾಳೆ . ನಂತರ ಪುಟ್ಟು ಭರತನಾಟ್ಯ ಬರುತ್ತಾ? ಅಂತ ಕೇಳಿದ ಪ್ರೊಫೆಸರ್ ಗೆ , ಹೂಂ ಬರುತ್ತೆ , ಆದರೆ ಪಪ್ಪಾ ನೀನು ಇನ್ನುಮೇಲೆ ಡ್ಯಾ ನ್ಸ್ ಎಲ್ಲಾ ಮಾಡಬಾರದು ಕಾಲೇಜಿಗೆ ಬಂದ್ದಿದ್ದೀಯ ಚೆನ್ನಾಗಿರಲ್ಲ ಅಂದಿದ್ದಾರೆ ಅದಕ್ಕೆ ಬೇಡ ಅನ್ನುತ್ತಾಳೆ ಲಕ್ಷ್ಮಿ .ಹಾಗಾದರೆ ಒಂದು ಕೆಲಸ ಮಾಡು ಅಕಸ್ಮಾತ್ ಒಂದೆರಡು ಕಾರ್ಯಕ್ರಮದಲ್ಲಿ ನಿನಗೆ ಪ್ರಶಸ್ತಿ ಬಂದರೆ ಭರತನಾ ಟ್ಯ ವನ್ನು ಮಾಡು ಇಲ್ಲವಾದರೆ ಬೇಡ ಎಂದು ಹೇಳಿ ,ಅವಳ ಮನೆಗೆ ಸುಲಭವಾಗಿ ಬಸ್ಸು ಸಿಕ್ಕುವ ಜಾಗದಲ್ಲಿ ಇಳಿಸಿ ತಾನು ಡೈರೆಕ್ಟರ್ ಆಫಿಸೀಗೆ ಮುಂದುವರಿಯುತ್ತಾನೆ ಪ್ರೊಫೆಸ್ಸರ್.
ಮುಂದುವರಿಯುವುದು ------------
Thursday, 6 December 2012
ಸ್ನೇಹ ರಮಾಕಾಂತ್ ಹುಟ್ಟು ಹಬ್ಬದ ಶುಭಾಶಯಗಳು
animation creaed by bvjagadeesha
Friday, 30 November 2012
ಪ್ರೇಮಾಮೃತ--------೬
ಪ್ರೇಮಾಮೃತ--------೬
ಹೊರಗಡೆಯೇ ನಿಂತು ಪೂರ್ತಿಯಾಗಿ ಹಾಡನ್ನು ಕೇಳಿದಮೇಲೆ ,ಒಳಗೆ ಬಂದರೆ , ಸುತ್ತಲೂ ಹುಡುಗಿಯರು ಸದ್ದಿಲ್ಲದೇ ಕುಳಿತಿದ್ದು , ಮೇಜಿನ ಮೇಲೆ ಮದ್ಯದಲ್ಲಿ ಕುಳಿತು ಲಕ್ಷ್ಮಿಯು ಹಾಡುತ್ತಿದ್ದ ಹಾಡನ್ನುಅತ್ಯಂತ ತಲ್ಲೀನತೆಯಿಂದ ತುಂಬಾ ಖುಷಿಯಾಗಿ ಆಲಿಸುತ್ತಿದ್ದುದನ್ನು ಕಂಡ ಪ್ರೊಫೆಸರ್ ಗೆ ಒಂದುನಿಮಿಷ
ಆಶ್ಚರ್ಯವೇ ಆಗುತ್ತದೆ. ಅವರು ತಕ್ಷಣವೇ ಹಠತ್ತಾಗಿ ಯಾರು ಹಾಡುತ್ತಿದ್ದುದು ? ಎಂದಾಗ ಎಲ್ಲರೂ ಹೆದರಿ ತಲೆತಗ್ಗಿಸಿ ನಿಲ್ಲುತ್ತಾರೆ. ಆಗ ನೀವಾಗಿ ನೀವು ೧೨.೩೦ ಘಂಟೆಗೆ ಕ್ಲಾಸ್ ಮುಗಿದ ಮೇಲೆ ಪ್ರಾದ್ಯಾಪಕರ ಕೊಠಡಿಗೆ ಬಂದರೆ ಸರಿ ಎಂದು ಗಡುಸು ದ್ವನಿಯಿಂದ ಹೇಳಿ ವಾಪಸ್ಸು ಹೋಗುತ್ತಾರೆ.ಕ್ಲಾಸ್ ಮುಗಿದ ನಂತರ ಲಕ್ಷ್ಮಿಯು ಪ್ರಾದ್ಯಾಪಕರು ಎಲ್ಲಿ ಬಯ್ಯುತ್ತಾರೋ ಎಂದು ಹೆದರಿ ಹೆದರಿ ೧೨-೩೦ಘಂಟೆಗೆ ಸರಿಯಾಗಿ ಪ್ರಾದ್ಯಾಪಕರ ಕೊಠಡಿ ಯೊಳಗೆ ಅಪ್ಪಣೆ ಪಡೆದು ಬಂದು ಕಣ್ಣಲ್ಲಿ ನೀರು ತುಂಬಿಕೊಂಡು ನಿಂತು ಕ್ಷಮಿಸಿ ಸಾರ್ , ಇನ್ನೆಂದೂ ಹೀಗೆ ಮಾಡಲ್ಲ ಎಂದು ನಡುಗುತ್ತಾ ಹೇಳುತ್ತಾಳೆ . ಅವಳನ್ನು ನೋಡಿ ಪ್ರಾದ್ಯಾಪಕರು ಮುಗುಳ್ನಗುತ್ತಾ , ಮಗೂ ನಾನು ನಿನ್ನನ್ನು ಬಯ್ಯಲು ಕರೆಯಲಿಲ್ಲಮ್ಮ ಎಂದು ಪ್ರೀತಿಯಿಂದ ಹೇಳಿ ಅಲ್ಲಿನೋಡು ಎಂದಾಗ ಅಲ್ಲಿ ಗಂಭಿರವಾಗಿ ನಗುತ್ತ ಪ್ರೊಫೆಸರ್ ದೀಪಕ್ ರಾಜ್ ರವರು ಕುಳಿತಿರುತ್ತಾರೆ. ಅವನು ಅವಳನ್ನು ನಗುತ್ತಾ ಬಾ ಇಲ್ಲಿ ಕುಳಿತುಕೋ ಎಂದು ತನ್ನ ಪಕ್ಕದಲ್ಲಿದ್ದ ಕುರ್ಚಿಯಲ್ಲಿ ಕೂರಲು ಆಜ್ಞಾಪಿಸುತ್ತಾನೆ. ಏ ಪುಟ್ಟು, ನಾಳೆ ದಿವಸ ಕಲಾಕ್ಷೇತ್ರದಲ್ಲಿ ಇಂಟರ್ ಕಾಲೇಜ್ ವಿವಿಧರೀತಿಯ ಸಾಂಸ್ಕೃತಿಕ ಸ್ಪರ್ಧೆ ನಡೆಯಲಿದೆ . ನೀನು ಭಾಗವಹಿಸುವೆಯ? ಎಂದು ಮುದ್ದಿನಿಂದ ಕೇಳಿದಾಗ ಲಕ್ಷ್ಮಿಯು ಅಷ್ಟೇ ಮುದ್ದಿನಿಂದ ಊಂ ... ಇಲ್ಲ ಸರ್ ಪ್ರಾಕ್ಟಿಸ್ ಮಾಡಿಲ್ಲ ಎಂದು ರಾಗ ಎಳೆಯುತ್ತಾಳೆ . ತಕ್ಷಣವೇ ಪ್ರೊಫೆಸರ್ ಒಂದು ಚಾನ್ಸ್ ತಗೊಳೋ ಬಂಗಾರ , ಕೇಳಲು ಗಾಯನ ಇಂಪಾಗಿದ್ದರೆ ಸಾಕು ಕಣೋ ಎಂದು ಮುದ್ದಿನಿಂದ ಹೇಳಿದಾಗ ಹೂಂ ಎಂದು ಒಪ್ಪುತ್ತಾಳೆ ಲಕ್ಷ್ಮಿ.
ಮುಂದುವರಿಯುವುದು ..............
Saturday, 24 November 2012
LEPAKSHI
Lepakshi, a distance of about 25 km via Hindupur....
There are three temples dedicated to Shiva, Vishnu and Virabhadra. On a hillock known as Kurma Saila (tortoise shaped hill), temples of 'Papanatheswara', 'Raghunatha', 'Srirama', 'Veerabhadra' and 'Durga' are located. Veerabhadra temple is the most important temple.
VIDURASHWATHA
VIDURASHWATHA
.It's about 120km from Bangalore on the way to Hyderabad...... reached up to Chikkaballapura, Gouri Bidanur and proceeded to a small place, about 8Km from there to a village Vidurashwatha, . place with lot of Ashwatha and neem trees......
Nagana Kallu
a small temple with large compound with thousands of serpent stones (nagana kallu)...... placed in by devotees...... who believed that their family will be blessed with children..... people were worshiping individually placed stones and quite few devotees sitting and offering prayers..... It's believed that Ashwtha is a male tree and Neem is female tree and there are occasions to celebrate the wedding between these two trees........ much required oxygen given out by these trees is very good for humans and can cause physiological changes in the body for better health..
The name Vidurashwatha is derived from that of a big Ashwatha (Ficus religiosa) tree located in this village. According to a legend of the times of Mahabharata, this tree was planted by Vidura, a courtier in the kingdom of Dhritarashtra; and hence the name Vidurashwatha Unfortunately, in 2001, this ancient tree fell to the ground
ಪ್ರೇಮಾಮೃತ ---------------------5
ಪ್ರೇಮಾಮೃತ ---------------------5
ಕಾಲೇಜಿಗೂ ಮತ್ತು ಲಕ್ಷ್ಮಿಯ ಮನೆಗೂ ಬಹಳ ದೂರವಾದುದರಿಂದ , ಮೊದಲನೆಯ ದಿನವೇ ಕ್ಲಾಸಿಗೆ ಹತ್ತು ನಿಮಿಷ ತಡವಾಗಿ ಬಂದ ಲಕ್ಷ್ಮಿಯನ್ನು ಅನಂತಮೂರ್ತಿ ಕೆಮಿಸ್ಟ್ರಿ ಅದ್ಯಾಪಕರು ,ನಾಳೆಯಿಂದ ಸರಿಯಾದ ಸಮಯಕ್ಕೆ ಕ್ಲಾಸಿಗೆ ಬರಬೇಕೆಂದು ಆಜ್ಞಾಪಿಸಿದಾಗ , ಸಾರೀ ಸರ್ ಎಂದು ನಗುತ್ತಾಳೆ . ಇಡೀ ತರಗತಿಯಲ್ಲಿಯೇ ಅತೀ ಸುಂದರ ಹಾಗೂ ಮುದ್ದಾಗಿರುವ ಮತ್ತು ಚಿಕ್ಕವಳಾದ ಲಕ್ಷ್ಮಿಯ ಮಾತನ್ನು ಹುಡುಗಿಯರೆಲ್ಲ ಮೆಚ್ಚುತ್ತಾರೆ . ಮರುದಿನ ಕಾಲೇಜಿನಲ್ಲಿ ತನ್ನ ತರಗತಿಗೆ ಹೋಗುತ್ತಿರುವಾಗ ಒಳ್ಳೆ ಬಿಳೀ ಬಣ್ಣದ ಅತ್ಯಂತ ಸುಂದರವಾದ ಯುವಕ ಅಂದರೆ ಅನಂತ್ ಅದ್ಯಾಪಕರು ನಡೆಯುವಾಗ ಅವರಿಗೆ ಮುಂಚೆಯೇ ಓಡಿ ಹೋಗಿ ತನ್ನ ಜಾಗವನ್ನು ಆವರಿಸಿಕೊಂಡ ಲಕ್ಷ್ಮಿಯನ್ನು ನೋಡಿ ಮುಗುಳ್ನಗುತ್ತ, ಎಲ್ಲರಿಗೂ ಗೂಡ್ಮಾರ್ನಿಂಗ್ ಎಂದು ಹೇಳಿ ಪಾಠವನ್ನು ಆರಂಭಿಸುತ್ತಾರೆ . ಅಂದಿನಿಂದ ತರಗತಿಯಲ್ಲಿ ಪಾಠಗಳು ಸಾಂಗವಾಗಿ ನಡೆಯಲು ಶುರುವಾಗುತ್ತದೆ . ಆದರೆ ಲಕ್ಷ್ಮಿ ಮಾತ್ರ ಬಸ್ಸಿನ ಅಭಾವದಿಂದ ಪ್ರತಿದಿನವೂ ಐದು ಹತ್ತು ನಿಮಿಷಗಳು ತಡವಾಗಿ ಬಂದು ತರಗತಿಯಲ್ಲಿ ಲೇಟ್ ಲತೀಫ್ ಎಂಬ ಹೆಸರಿನಿಂದ ಪ್ರಸಿದ್ಧಿಯಾಗುತ್ತಾಳೆ . ಎರಡನೆಯ ಪೀರಿಯಡ್ ನಲ್ಲಿಅದ್ಯಾಪಕರುಬರಲಿಲ್ಲವಾದಕಾರಣ,ತರಗತಿಯಲ್ಲಿ ಬಹಳ ಗಲಾಟೆ ನಡೆಯುತ್ತಿರುತ್ತದೆ .ಪ್ರೊಫೆಸರ್ ದೀಪಕರಾಜ್ ಬಂದು ಅತ್ಯಂತ ಗಂಭೀರವಾಗಿ ದಯವಿಟ್ಟು ಗಲಾಟೆ ಮಾಡಬೇಡಿ , ಬೇರೆ ತರಗತಿಯವರಿಗೆ ತೊಂದರೆಯಾಗುತ್ತದೆ ಎಂದು ಬುದ್ದಿ ಹೇಳಿ ಹೋಗುತ್ತಾರೆ.
ಮಾರನೆ ದಿವಸ ಅದೇ ತರಗತಿ ಅಂದರೆ ಮೊದಲನೇ ಪಿ.ಯು.ಸಿ.ತರಗತಿಯಲ್ಲಿ ಅದ್ಯಾಪಕರು ರಜವಿದ್ದ ಕಾರಣ ತರಗತಿಯಲ್ಲಿ ಬರೀ ವಿದ್ಯಾರ್ಥಿಗಳೇ ಇದ್ದರೂ ಕೂಡ ಸದ್ದೇ ಇಲ್ಲದಿದ್ದುದನ್ನು ಕಂಡ ಪ್ರೊಫೆಸರ್ ನೋಡೋಣವೆಂದು ತರಗತಿಯಹತ್ತಿರ ಬಂದಾಗ ಅತ್ಯಂತ ಮಧುರವಾದ ಕೋಕಿಲ ಕಂಠದಿಂದ ಹಿಂದಿ ಚಲನಚಿತ್ರದ ಹಾಡು "ಸಾಯೋನಾರ ಸಾಯೋನಾರ"ಎಂದು ಕೇಳಿ ಬರುತ್ತಿರುತ್ತದೆ.
ಮುಂದುವರಿಯುವುದು .................
Saturday, 17 November 2012
PREMAAMRUTA-----------4
ಪ್ರೇಮಾ ಮೃತ-------4
ಸುಮಾರು ಸಂಜೆ ಐದು ಘಂಟೆಹೊತ್ತಿಗೆಲಕ್ಷ್ಮಿಯತಂದೆನಾರಾಯಣರಾಯರು ಮತ್ತು ತಾಯಿ ಶಾಂತಾದೇವಿ ಯವರು ಮೈಸೂರ್ ನಿಂದ ವಾಪಸ್ಸು ಬರುತ್ತಾರೆ . ಲಕ್ಷ್ಮಿಯು ತನ್ನ ತಂದೆಯ ತೊಡೆಯಮೇಲೆ ಮುದ್ದಿನಿಂದ ಕುಳಿತುಕೊಂಡು ಅಪ್ಪ , ಎಂದು ಬೆಳಿಗ್ಗೆಯಿಂದ ನಡೆದ ವಿಷಯವನ್ನು ಎಡೆಬಿಡದೆ ವಿವರಿಸುತ್ತಾಳೆ . ದೀಪು ಮತ್ತು ನರಸಮ್ಮನವರು ಬಂದುಹೋಗಿದ್ದು ಮತ್ತು ಲಕ್ಷ್ಮಿಯು ಅಪರಿಚಿತರಾದ ಅವರುಗಳಿಗೆ ಮಾಡಿದ ಆತಿತ್ಯವನ್ನು ಕೇಳಿ ಆಶ್ಚರ್ಯ ಪಡುತ್ತಾರೆ ಹಾಗೆಯೇ ತಮ್ಮ ಪ್ರೀತಿಯ ಮಡದಿಗೆ ನೋಡಿದ್ರಾ ಶಾಂತಮ್ಮನವರೇ ನಾವಿಲ್ಲದಾಗ ನಮ್ಮ ಮಗಳ ಕಾರ್ಬಾರನ್ನು ಎಂದು ಛೇಡಿಸುತ್ತಾರೆ . ಮರುದಿನ ಬೆಳಿಗ್ಗೆ ಲಕ್ಷ್ಮಿಯ ಪರೀಕ್ಷೆಯ ಫಲಿತಾಂಶವನ್ನು ನೋಡಿದ ರಾಯರಿಗೆ ಮತ್ತು ಶಾಂತಮ್ಮನವರಿಗೆ ಆದ ಆನಂದ ಅಷ್ಷ್ಟಿಷ್ಟಲ್ಲ . ರಾಯರು , ಲಕ್ಷ್ಮಿಯು ಇಷ್ಟ ಪಟ್ಟಂತ ಜ್ಞಾನಾಮೃತ ಕಾಲೇಜಿಗೆ ಲಕ್ಷ್ಮಿಯನ್ನು ಸೇರಿಸಲು, ಅರ್ಜಿಯನ್ನು ಪಡೆಯಲು ಲಕ್ಷ್ಮಿಯೊಂದಿಗೆ ಕಾಲೇಜಿನ ಅರ್ಜಿಯನ್ನು ಸ್ವೀಕರಿಸುವ ವಿಭಾಗದ ಸಾಲಿನಲ್ಲಿ ನಿಂತಿರುತ್ತಾರೆ . ತುಂಬಾ ದೂರವಿದೆಯಲ್ಲ ಕಾಲೇಜು , ಮಗುಹೇಗೆಇಷ್ಟುದೂರಬರುತ್ತದೆಎಂದುಒಳಗೊಳಗೇಚಿಂತಿಸುತ್ತಿರುತ್ತಾರೆರಾಯರು . ತುಂಬಾ ಬಿಸಿಲಾದ್ದರಿಂದ ಲಕ್ಷ್ಮಿಯು ತನ್ನ ಚೂಡಿದಾರ್ ಮೇಲಿದ್ದ ವೇಲ್ ಅನ್ನು ಬಿಸಿಲು ತಾಗದಂತೆ ತಲೆಯಮೇಲೆ ಹೊದ್ದಿಕೊಂಡು ನಿಂತಿರುತ್ತಾಳೆ . ಇದ್ದಕ್ಕಿದ್ದಂತೆ ಹಲೋ ನನ್ನ ನೆನಪಿದೆಯೇ ಎಂದು ನಗುತ್ತ ಕೇಳುತ್ತಿದ್ದಂತೆಯೇ , ಲಕ್ಷ್ಮಿಯು ಅತ್ಯಾಶ್ಚರ್ಯ ದಿಂದ ಅರ್ರೆ ಅಂಕಲ್ ನೀವಿಲ್ಲಿ? ಎಂದು ಒಂದು ನಿಮಿಷ ಬೆರಗಾಗುತ್ತಾಳೆ ನಂತರ ತನ್ನ ತಂದೆಗೆ ದೀಪುವನ್ನು ಪರಿಚಯಿಸುತ್ತಾಳೆ . ಬನ್ನಿ ಸಾರ್ ಎಂದು ದೀಪುವು ಅವರುಗಳನ್ನುಕರೆದೊಯ್ದು ಕಾಲೇಜಿನ ಲ್ಯಾಬ್ ಗಳು ಮತ್ತು ಶಿಕ್ಷಕರ ಕೊಠಡಿಗಳನ್ನೆಲ್ಲಾ ತೋರಿಸುತ್ತಾ ಇದೇ ನನ್ನ ಸೀಟ್ ಎಂದು ಮತ್ತು ಆ ಕಡೆ ಇದ್ದ ಬೇರೆ ಪ್ರಾದ್ಯಾಪಕರುಗಳಾದ ಅನಂತಮೂರ್ತಿ ಮತ್ತು ಕೃಷ್ಣಮೂರ್ತಿ ಎಲ್ಲರನ್ನು ಪರಿಚಯ ಮಾಡುವಷ್ಟರಲ್ಲಿ ಲಕ್ಷ್ಮಿಯು ಟೇಬಲ್ ಮೇಲಿದ್ದ" ಪ್ರೊಫೆಸರ್ ದೀಪಕ್ ರಾಜ್" ಎಂಬ ಬೋರ್ಡ್ ನೋಡಿ ಆಶ್ಚರ್ಯದಿಂದ ತಲೆ ತಗ್ಗಿಸಿ ಸಾರಿ ಸಾರ್ ತುಂಬಾಸಲಿಗೆಯಿಂದ ನಾನು ಮಾತನಾಡಿದೆ ಎಂದು ನಿಂತಾಗ, ಸುಮ್ಮನಿರೋ ಪುಟ್ಟ ಎಂದು ಅವಳಗಲ್ಲ ಹಿಡಿದು ತಲೆ ಎತ್ತಿ ಮುದ್ದಿನಿಂದ ತಲೆ ಸವರುತ್ತಾನೆ ದೀಪು.. ರಂಗಪ್ಪ ಎಂದು ಕರೆದು ಅವನ ಹತ್ತಿರ ಅರ್ಜಿಯನ್ನು ತರಿಸಿ ಭರ್ತಿಮಾಡುವಂತೆ ಲಕ್ಷ್ಮಿಗೆ ತಿಳಿಸುತ್ತಾನೆ ದೀಪು . ನಂತರ ನಾರಾಯಣರಾಯರ ಬಳಿ ಅಡ್ಮಿಶನ್ ಗೆ ಹಣವನ್ನು ತೆಗೆದುಕೊಂಡು ಅರ್ಜಿಯಮೇಲೆ ತನ್ನರುಜು ವನ್ನು ಮಾಡಿ ಇದಕ್ಕೆ ರಶೀತಿ ಹಾಕಿಸಿಕೊಂಡು ಬಾ ಎಂದು ರಂಗಪ್ಪನೊಂದಿಗೆ ಕಳುಹಿಸಿಕೊಡುತ್ತಾನೆ . ರಶೀತಿಯನ್ನು ರಾಯರಿಗೆ ಕೊಟ್ಟು ಅವರುಗಳನ್ನು ಬೀಳ್ಕೊಡುತ್ತಾರೆ ಪ್ರೊಫೆಸರ್ ದೀಪಕ್ ರಾಜ್ .
ಮುಂದುವರಿಯುವುದು ..................................
Saturday, 10 November 2012
ಪ್ರೇ ಮಾ ಮೃ ತ ---------3
ಪ್ರೇ ಮಾ ಮೃ ತ ---------3
ಸರಿ ನಾವಿನ್ನು ಬರೋಣವೇ ಅಂತ ಎದ್ದಾಗ ಆಂಟಿ ನನಗೆ ಕಾಫಿ ಮಾಡಲು ಬರುವುದಿಲ್ಲ , ಬೇಕಾದರೆ ಹಾರ್ಲಿಕ್ಕ್ಸ್ ಮಾಡಿಕೊಡುತ್ತೇನೆ ಎಂದು ಎಲ್ಲರಿಗೂ
ತಂದುಕೊಡುತ್ತಾಳೆ ಲಕ್ಷ್ಮಿ. ದೀಪು ಲಕ್ಷ್ಮಿಯನ್ನು ಪಾಪು ಬಾ ಇಲ್ಲಿ ಎಂದು ಕರೆದು ಚಿಕ್ಕ ಮಗುವಿನಂತೆ ಪಕ್ಕದಲ್ಲಿ ಕೂರಿಸಿಕೊಂಡು ಒಂದು ಮಾತು ನೋಡು , ನಾನು ನಿನ್ನನ್ನು ಎಲ್ಲೊ ಏಳೆಂಟು ವರುಷದ ಹುಡುಗಿ ಅಂದು ಕೊಂಡಿದ್ದೆ . ಆದರೆ ನೀನೀಗ ಕಾಲೇಜಿಗೆ ಹೋಗುವ ಹುಡುಗಿ . ಹೀಗೆಲ್ಲಾ ಇರಬಾರದು ಎಂದ ತಕ್ಷಣ ಅವಳು ಎದ್ದು ಒಳಗೆ ಹೋಗಿ ಎರಡೇ ನಿಮಿಷದಲ್ಲಿ ಕನಕಾಂಬರ ಬಣ್ಣದ ತುಂಬುತೋಳಿನ ಚೂಡಿಧಾರ್ ಧರಿಸಿ , ಹಣೆಗೆ ಕೆಂಪುಬಣ್ಣದ ತಿಲಕವಿಟ್ಟು ಕೈಗೆ ಬಳೆತೊಟ್ಟು ಕಿವಿಗೆ ಲೋಲಕ್ ಹಾಕಿ ಬಾಬ್ ಕಟ್ ನಿಂದ ಬಂದ ಲಕ್ಷ್ಮಿಯನ್ನು ನೋಡಿ ಬೆರಗಾದರು ದೀಪೂ ಹಾಗೂ ನರಸಮ್ಮನವರು . ಅತ್ಯಂತ ಸಂತಸದಿಂದ ಒಳ್ಳೆ ಹುಡುಗಿ ಎಂದು ತಲೆಯಮೇಲೆ ಮುದ್ದಿನಿಂದ ತಟ್ಟಿ ಹೊರಟುನಿಲ್ಳುತ್ತಾರೆ . ಅಷ್ಟರಲ್ಲಿ ದೇವರ ಮನೆಯಿಂದ ಕುಂಕುಮದ ಬಟ್ಟಲು , ಅದರೊಂದಿಗೆ ಒಂದು ತಟ್ಟೆಯಲ್ಲಿ ಎಲೆ ಅಡಿಕೆ ಮತ್ತು ಸೇಬು ಹಣ್ಣಿನೊಂದಿಗೆ ಬಂದ ಲಕ್ಷ್ಮಿ , ಆಂಟಿ , ಕುಂಕುಮ ಇಟ್ಟುಕೊಳ್ಳಿ ಎಂದಾಗ , ನಾನು ಕುಂಕುಮ ಇಟ್ಟುಕೊಳ್ಳುವಂತಿಲ್ಲ ಮಗೂ ಎಂದು ಹಣ್ಣನ್ನು ಮಾತ್ರ ತೆಗೆದುಕೊಂಡು , ಚಿಕ್ಕಮಗು ನೀನು ಪರವಾಗಿಲ್ಲ ಎಂದು ಪ್ರೀತಿಯಿಂದ ಅವಳ ತಲೆಯನ್ನು ಸವರಿ ದೇವರು ನಿನ್ನನ್ನು ಚೆನ್ನಾಗಿಟ್ಟಿರಲಿ ಎಂದು ಹಾರೈಸಿ ಹೊರಡುತ್ತಾರೆ .
ಅವರುಗಳನ್ನು ಬೀಳ್ಕೊಟ್ಟು ಒಳಗೆಬಂದು ಬಾಗಿಲು ಹಾಕಿಕೊಳ್ಳುತ್ತಾಳೆ ಲಕ್ಷ್ಮಿ .
ಮುಂದುವರಿಯುವುದು -------------
ಎಲ್ಲರಿಗು ದೀಪಾವಳಿಯ ಶುಭಾಷಯಗಳು
ಎಲ್ಲರಿಗು ದೀಪಾವಳಿಯ ಶುಭಾಷಯಗಳು
ದೀಪಾವಳಿಯ ಆಚರಣೆಯ ಹಿಂದೆ ಪ್ರಸಿದ್ಧ ದಂತಕಥೆಇದೆ ಭಗವಾನ್ ಶ್ರೀ ರಾಮ ಅಯೋಧ್ಯಾ ನಗರದ ರಾಜಕುಮಾರ ಇವರ ತಂದೆ ದಶರಥ ಮಹಾರಾಜ . ಶ್ರೀ ರಾಮ್ತ ತಂದೆಯ ಸೂಚನೆಗಳ ಪ್ರಕಾರ ಕಾಡಿನಲ್ಲಿ ತಂಗಿದ್ದರು ಕಾ ಡಿನಲ್ಲಿ, ರಾಮನ ಪತ್ನಿಯಾದ ಸೀತಾ ಮಾತೆಯನ್ನು - ಲಂಕಾಧೀಶ ರಾವಣ ಅಪಹರಿಸಿದನು . ರಾವಣನ ಬಂಧನದಲ್ಲಿ ಇದ್ದ ಸೀತಾ ಮಾತೆಯ ಸಲುವಾಗಿ ರಾಮ ಲಂಕಧಿಶನಾದ ರಾವಣನ ಮೇಲೆ ಯುದ್ಧ ಮಾಡಿದ , ಇದರಲ್ಲಿ, ರಾಮ ರಾವಣನನ್ನೂ ಸೋಲಿಸಿ ತನ್ನ ಪತ್ನಿ ಸೀತೆ ಜೊತೆಗೆ ಶ್ರೀ ರಾಮ ಅಯೋಧ್ಯೆಯನ್ನು ತಲುಪಿದಾಗ, ಅಯೋಧ್ಯೆಯ ಜನರು ತಮ್ಮ ಅಚ್ಚುಮೆಚ್ಚಿನ ರಾಜಕುಮಾರ ಶ್ರೀ ರಾಮ ಮತ್ತು ಸೀತಾದೇವಿಯನ್ನು ಸ್ವಾಗತಿಸುವ ಸಲುವಾಗಿ ಎಲ್ಲಾರ ಮನೆಯಲ್ಲಿ ದೀಪಗಳಿಂದ ಅಯೋಧ್ಯೆಯ ನಗರವು ಅಲಂಕರಿಸಲಾಗಿತ್ತು.ಆದುದರಿಂದ ದೀಪಾವಳಿಯ ದಿವಸ ಎಲ್ಲರ ಮನೆಯಲ್ಲಿಯೂ ದೀಪಗಳಿಂದ ಅಲಂಕರಿಸುತ್ತಾರೆ
Sunday, 4 November 2012
Thursday, 1 November 2012
ಸಮಸ್ತ ಬಾಂಧವರುಗಳಿಗೆಲ್ಲ ಕರ್ನಾಟಕ ರಾಜ್ಯೋತ್ಸವದ ಶುಭಾಷಯಗಳು
ಕಾವೇರಿ ಕಾಲ್ತೋಳೆಯೇ ಕಾದಿರುವಳೂ ....
ಗೊದಾವರೀದೇವಿ ಹೂಮುಡಿವಳೂ ......
ಒಡಲೆಲ್ಲ ಸಿಂಗರಿಸೆ ತುಂಗೆ ಇವಳೂ ....
ಒಡನಾಡೆ ಭದ್ರೆತಾ ಜತೆಗಿರುವಳೂ ......
ಕನ್ನಡದ ಕಸ್ತೂರಿ ತಿಲಕವಿಟ್ಟೂ .........
ಕನ್ನಡದ ಕಾವ್ಯಗಳ ಮಾಲೆ ತೊಟ್ಟು .......
ಕನ್ನಡದ ಕಾಲ್ಗೆಜ್ಜೆ ನಾದಕೊಟ್ಟು ........
ಹೊನ್ನುಡಿಯ ಭೂಮಿಯಲಿ ಹೆಜ್ಜಇಟ್ಟು .......
ಬಾತಾಯಿ ಭಾರತಿಯೇ ಬಾವಭಾಗೀರತಿಯೇ ....
ಈ ಸಾಲುಗಳನ್ನು ಓದಿದರೆ ನಮ್ಮ ಕರ್ನಾಟಕದ ಬಗ್ಗೆ ಎಷ್ಟು ಹೆಮ್ಮೆ ಎನಿಸುತ್ತದಲ್ಲವೇ ......
ಇದನ್ನು ಬರೆದ ಕವಿಗಳಿಗೆ ನಮ್ಮ ನಮನ
ಸಮಸ್ತ ಬಾಂಧವರುಗಳಿಗೆಲ್ಲ ಕರ್ನಾಟಕ ರಾಜ್ಯೋತ್ಸವದ ಶುಭಾಷಯಗಳು
ಲತಾ ಜಗದೀಶ
ಎಲ್ಲರಿಗು 2012 ರ ಕನ್ನಡ ರಾಜ್ಯೋತ್ಸವದ ಶುಭಾಷಯಗಳು
ಎಲ್ಲರಿಗು 2012 ರ ಕನ್ನಡ ರಾಜ್ಯೋತ್ಸವದ ಶುಭಾಷಯಗಳು
ಭಾರತ ಗಣರಾಜ್ಯ ಮತ್ತು ರಾಜ್ಯಗಳ ರಚನೆಯಾದ ನಂತರ, ಮೈಸೂರು ದಕ್ಷಿಣ ಭಾರತದ ರಾಜ್ಯಗಳಲ್ಲಿ ಒಂದಾಯಿತು.
ಆದರೆ ಉತ್ತರ ಮತ್ತು ಹೈದರಾಬಾದ್ ಕರ್ನಾಟಕ ಪ್ರದೇಶದ ಜನರುಮೈಸೂರು ಹೆಸರನ್ನು ಸ್ವೀಕರಿಸುವುದಿಲ್ಲ ಮತ್ತು ಹೆಸರು ಬದಲಾವಣೆಗೆ ಒತ್ತಾಯಿಸಿದರು
ಸುದೀರ್ಘ ಚರ್ಚೆಯ ನಂತರ ರಾಜ್ಯದ ಹೆಸರು ನವೆಂಬರ್ 1, 1973 ರಂದು ಕರ್ನಾಟಕ ಎಂದು ಬದಲಾಯಿಸಲಾಯಿತು.
ಅಧಿಕೃತವಾಗಿ ಹೊಸ ರಾಜ್ಯದ ನವೆಂಬರ್ 1 ರಂದು ಜನಿಸಿತು ಮತ್ತು ಈ ದಿನ ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವ ಎಂದು ಆಚರಿಸಲಾಗುತ್ತದೆ.
ರಾಜ್ಯೋತ್ಸವ ಎಂದರೆ "ಒಂದು ರಾಜ್ಯದ ಜನ್ಮ" ಎಂದರ್ಥ.
Sunday, 28 October 2012
KANNADA SERIAL STORY" PREMAAMRUTHA"
ಪ್ರೇಮಾಮೃತ
ಈ ಕಾದಂಬರಿಯನ್ನು ಬರೆದಿರುವವರು ಕಥಾ ಲೇಖಖಿ ಶ್ರೀಮತಿ ಹಾ ರಾ ಲತ .
ಲೇಖಖಿ ಪರಿಚಯ
ದಿ ಜಮ್ಮೆದಾರ್ ಹಿರಣ್ಣಯ ಮತ್ತು ಸಾವಿತ್ರಮ್ಮನವರ ಮಗನಾದ ರಾಮಮೂರ್ತಿ ಹಾಗೂ ಕಮಲಮ್ಮನವರಿಗೆ ಜನಿಸಿದ ಹಾಸನ ರಾಮಮೂರ್ತಿ ಲತ ಆದ ನಾನು ವಿವಾಹಿತಳಾಗಿ ಸೇರಿದ್ದು ಬೆಳ್ಳೂರು .
ದಿ ವೆಂಕ ಟೇ ಶ ಯ್ಯ ಹಾ ಗೂ ದಿ ಸುಬ್ಬಮ್ಮನವರಮಗನಾದದಿವೆಂಕಟಸುಬ್ಬರಾವ್ ಹಾಗೂ ಶಾರದಮ್ಮನವರ ಕಿರಿಯ ಮತ್ತು ಕಡೆಯ ಮಗನಾದ ಬಿ ವಿ ಜಗದೀಶ ರನ್ನು ವರಿಸಿ ನನ್ನ ಜೀವನ ಯಾತ್ರೆಯನ್ನು ಸುಸಂಸ್ಕೃತ ವಾಗಿ ನಡೆಸುತ್ತಾ , ಜೀವ ನ ದ ಲ್ಲಿ ಎ ನಾ ದ ರೂ ಸಾ ಧ ನೆ ಮಾಡಬೇಕೆಂಬಉದ್ದೇಶದಿಂದನನ್ನಈಚೊಚ್ಚಲ ಕಾ ದಂಬ ರಿಯಾದ "ಪ್ರೇ ಮಾಮೃತ" ವನ್ನುಜಸಾಮಾನ್ಯರಮನಸ್ಸನ್ನು ಮ ಟ್ಟು ವಂತೆ ಒಂದು ಪ್ರಯತ್ನವನ್ನು ಮಾಡಿದ್ದೇನೆ .
ಈ ನನ್ನ " ಪ್ರೇ ಮಾಮೃತ " ಕೃತಿ ಯನ್ನು ತಾವುಗಳು ಓದಿ ಆಶಿರ್ವಾದ ಮಾಡ ಬೇಕೆಂದು ವಿನಂತಿಸಿಕೊಳ್ಳುತ್ತೇನೆ .
ಇಂತಿ ತಮ್ಮ ವಿಶ್ವಾಸಿ
ಹಾ ರಾ ಲತ
ಪೀಟಿಕೆ
ಈಕಾದಂಬರಿಯಲ್ಲಿಬರುವಎಲ್ಲಾಪಾತ್ರಗಳುಕಾಲ್ಪನಿಕವಾದುದುಹಾಗೂ ಇದರಲ್ಲಿಬರುವಪಾತ್ರಗಳುಯಾರಿಗೂಅನ್ವಯಿಸುವುದಿಲ್ಲ .
ಈಗಿನ ಸಮಾಜದಲ್ಲಿ ಜನ ಸಾಮಾನ್ಯರು ನೋಡುವ ವಿಷಯವೇನೆಂದರೆ ಒಂದು ಸಂಸಾರದಲ್ಲಿ ಅತ್ತೆ ಸೊಸೆಯರ ಜಗಳ , ಮಾವ ಅಳಿಯಂದಿರ ಜಗಳ ಅಕ್ಕತಂಗಿಯರ ಕಚ್ಚಾಟ , ಅಣ್ಣ ತಮ್ಮಂದಿರ ಹೊಡೆದಾಟ , ಸ್ನೇಹಿತರ ಕಾದಾಟ. ಪರಸ್ಪರ ಪ್ರೀತಿ , ಪ್ರೇಮ , ಅನುರಾಗವು ಮತ್ತು ವಿಶ್ವಾಸವು ಜನ ಸಾಮಾನ್ಯರ ಜೀವನದಲ್ಲಿ ಕಾಣೆ ಯಾಗಿರುತ್ತದೆ .
ಆದರೆ ಈ ನನ್ನ ಪ್ರೇಮಾಮೃತ ಕಾದಂಬರಿಯಲ್ಲಿ ಬರುವ ಪಾತ್ರಗಳೆಲ್ಲವೂ ಇದರ ತದ್ವಿರುದ್ದ . ಅಂದರೆ ಒಂದು ಸಂಸಾರದಲ್ಲಿ ಅತ್ತೆ ಸೊಸೆಯರ ಪ್ರೀತಿ, ಮಾವ ಅಳಿಯಂದಿರ ವಿಶ್ವಾಸ , ಅಣ್ಣ ತಮ್ಮಂದಿರ ಅನುರಾಗ , ಸ್ನೇಹಿತರುಗಳ ನಂಬಿಕೆ ವಿಶ್ವಾಸ , ಹಾಗ ತಾಯಿ ಮಕ್ಕಳ ಪ್ರೆಮಗಳಿಂದ ಕೂಡಿದೆ .
ಈ ನಮ್ಮ ಸಮಾಜದಲ್ಲಿ ಜೀವನವು ಈ ರೀತಿ ಪ್ರೇ ಮಾ ಮೃ ತ ದಿಂದ
ರಸಭರಿ ತವಾದರೆ ನಮ್ಮೆಲ್ಲರ ಜೀವನವು ಎಷ್ಟು ಸೊಗಸಲ್ಲವೆ ?
ಹಾ ರಾ ಲತ
ಪ್ರೇಮಾಮೃತ ------ 1
ಸಾರ್ ಸಾರ್ ಬಾಗಿಲು ಎಂದು ಬಾಗಿಲು ತಟ್ಟುತ್ತಾನೆ . ಯಾರು ? ಎಂದು ಬಾಗಿಲು ತೆಗೆದಾಗ , ಎಂದೂ ನೋಡಿರದ ಸುಮಾರು ಆರೂವರೆ ಅಡಿ ಯಷ್ಟು ಎತ್ತರವುಳ್ಳ ಕಪ್ಪು ಬಣ್ಣದ ಸುಂದರವಾದ ದೃಡ ಕಾಯಅಜಾನುಬಾಹುವಂತಿರುವ
ಸುಮಾರು ಇಪ್ಪತೈದು ವರ್ಷದ ತರುಣನು, ಬೇಗ ನೀರು ಕೊಡಿ , ಅಮ್ಮ ಬಹಳ ಸುಸ್ತಾಗಿದ್ದಾಳೆ ಎಂದು ಆತಂಕದಿಂದ ಕೇಳುತ್ತಾನೆ ಈಗ ಕೊಟ್ಟೆಅಂಕಲ್ಎಂದು ಓಡಿ ಹೋಗಿ ನೀರು ತಂದುಕೊಡುತ್ತಾಳೆ . ಎಲ್ಲಿ ಅಂಕಲ್ , ಆಂಟಿ ಎಂದುಕೇಳಿಅವನನ್ನೇ ಹಿಂಬಾಲಿಸುತ್ತಾಳೆ ಅತ್ಯಂತ ಸುಂದರವಾಗಿರುವ ಬಿಳಿ ಬಣ್ಣದ ಮುದ್ದು ಮುದ್ದಾಗಿರುವ ಬೋಳು ಹಣೆ ,ಬೋಳುಗೈ ಬೋಳುಗಿವಿಯಲ್ಲಿರುವ ಎತ್ತರವಾಗಿ ಪುಟ್ಟ ಜುಟ್ಟು ಕಟ್ಟಿರುವ ಸುಮಾರು ಹದಿನಾಲ್ಕು ವರ್ಷದ ಬಾಲಕಿ ಲಕ್ಷ್ಮಿ . ಸ್ವಲ್ಪ ನೀರನ್ನು ಕ್ಚುಮಿಕಿಸಿದ ನಂತರ ಉಸಿರಾಡುತ್ತಾರೆ ಸುಮಾರು ಐವತ್ತು ವರುಷದ ವಿಧವೆ ನರಸಮ್ಮನವರು .ಆಂಟಿ ಎದ್ದೇಳಿ ನಮ್ಮನೆ ಇಲ್ಲೇ ಇದೆ ಬನ್ನಿ ಎಂದು ಅವರಿಬ್ಬರನ್ನೂ ಮನೆಗೆ ಕರೆತರುತ್ತಾಳೆ ಲಕ್ಷ್ಮಿ .ಆಂಟಿ ಇಲ್ಲೇ ಕುಳಿತುಕೊಳ್ಳಿ ಎಂದು ದೀವಾನ ತೋರಿಸಿ , ಇನ್ನೂ ಸ್ವಲ್ಪ ನೀರುಕೊಡಲೇ ಎಂದು ಕೇಳುತ್ತಾಳೆ . ಬೇಡ ಮಗೂ , ಚೂರೇ ಚೂರು ಸಕ್ಕರೆ ಕೊಡು ಎಂದು ಕೇಳುತ್ತಾರೆ ನರಸಮ್ಮನವರು .ಆಂಟಿ ನಿಮಗೆ ಸಕ್ಕರೇನೆ ಬೇಕಾ ? ಇವತ್ತು ನನಗೆ ಇಷ್ಟ ಅಂತ ಮಮ್ಮಾಜಿ ಜಾಮೂನ್ ಮಾಡಿ ದ್ದಾಳೆ ಕೊಡಲಾ ? ಎಂದು ಬಹಳ ಚೂಟಿಯಾಗಿರುವ ಲಕ್ಷ್ಮಿ ಓಡಿ ಹೋಗಿ ಅಡು ಗೆಮನೆಯಿಂದ ತಟ್ಟೆಯಲ್ಲಿ ಜಾಮೂನ್ ಮತ್ತು ಬಿಸಿಬೇಳೆಬಾತ್ ಅನ್ನು ಹಿಡಿದು ಬಂದು ದಿವಾನಾ ಮೇಲೆ ಮಲಗಿದ್ದ ನರಸಮ್ಮನವರನ್ನು ಎಬ್ಬಿಸಿ ಆಂಟಿ ನಾನೇ ತಿನ್ನಿಸುತ್ತೇನೆ ಎಂದು ಅಕ್ಕರೆಯಿಂದ ಜಾಮೂನಿನ ಕ್ಷೀರವನ್ನು ಬಾಯಿಗಿಡುತ್ತಾಳೆ ದೀಪೂ ನೀನೂ ಸ್ವಲ್ಪ ತಗೊಳ್ಳೋ ಎಂದಾಗ ...............
ಮುಂದುವರಿಯುವುದು .........................
Saturday, 27 October 2012
Thursday, 25 October 2012
SHREE SARASWATHI POOJA HELD ON 20-10-2012
ನವರಾತ್ರಿ ಹಬ್ಬ ವನ್ನು ನಮ್ಮ ಮನೆಯಲ್ಲಿ ಸರಸ್ವತಿ ಹಬ್ಬ ದಿಂದ ಆಚರಿಸುತ್ತೇವೆ .ಈ ಫೋಟೋ ದಲ್ಲಿರುವ ಗೊಂಬೆಯನ್ನು ನಿಲುಗೌರಿ ಎಂದು ಕರೆಯುತ್ತೇವೆ . ಈ ಗೌರಿಯು ಸುಮಾರು ಅರವತ್ತು ವರುಷದ ಹಿಂದಿನ ಮರದ ಗೊಂಬೆ . ಇದು ನನಗೆ ನನ್ನ ಅತ್ತೆಯವರಾದ ದಿವಂಗತ ಶಾರದಮ್ಮ ವೆಂಕಟಸುಬ್ಬರಾವ್ ಅವರ ಆಶಿರ್ವಾದ ದಿಂದ ಸಿಕ್ಕಿದ್ದು . ಇದನ್ನು ನಾವು ಇಪ್ಪತೇಳು ವರುಷಗಳಿಂದ ದೇವರ ಕೃಪೆಯಿಂದ ದಸರಾ ಹಬ್ಬವನ್ನು ಆಚರಿಸುತ್ತಾ ಬಂದಿದ್ದೇವೆ . ಇದರ ಇನ್ನೊಂದು ವಿಷೇಶತೆ ಏನೆಂದರೆ ಸರಸ್ವತಿ ಹಬ್ಬದಂದು ನಮ್ಮ ಅತ್ತೆಯವರಾದ ಶಾರದಮ್ಮ ನವರ ಹುಟ್ಟು ಹಬ್ಬವಾಗಿರುತ್ತದೆ .
by
ಲತ ಜಗದೀಶ
Wednesday, 24 October 2012
Tuesday, 23 October 2012
Sunday, 21 October 2012
Friday, 19 October 2012
DASARA NAADA HABBA
ದಸರಾ NAADA HABBA
ದಸರಾ ಅಥವಾ Naada Habba ಕನ್ನಡಿಗರ ಮತ್ತೊಂದು ಮುಖ್ಯವಾದ ಹಬ್ಬವಾಗಿದೆ.
ಹಬ್ಬವು 9 ದಿನಗಳ ಕಾಲ ನಡೆಸುತ್ತದೆಆದುದರಿಂದ ನವರಾತ್ರಿ ಎಂದು ಕರೆಯುತ್ತಾರೆ.
ಆಚರಣೆಗಳು ಅನನ್ಯವಾಗಿರುವ ದೇವತೆ Chamundeshwari (ದುರ್ಗಾ) ಮಾತೆಯನ್ನು ಪೂಜಿಸುವುದು
'bombe habba' ದಿನ ವರ್ಣರಂಜಿತ ಗೊಂಬೆಗಳ ಪ್ರದರ್ಶನ ಮಾಡುತ್ತಾರೆ
ಸರಸ್ವತಿ (ಶಿಕ್ಷಣ ದೇವತೆ) ಪೂಜಾ, Ayudha ಪೂಜಾ ಅಂತಿಮವಾಗಿ ಉಪಕರಣಗಳನ್ನು ಬಳಸುವ ಪೂಜೆ ಮತ್ತು
ವಿಜಯದಶಮಿ ಪೂಜೆ ದುರ್ಗಾದೇವಿಯ ದಸರಾ ಪ್ರಮುಖ ಹಬ್ಬಗಳು ದಿನಗಳಾಗಿವೆ.
Naada Habba, ಮೈಸೂರು ಹಿಂದಿನ ರಾಜ ಮನೆತನದ 600 ವರ್ಷಗಳ ಕಾಲ ಆಚರಿಸಲಾಯಿತು
ಆದರೆ ಕರ್ನಾಟಕ ರಾಜ್ಯ 1956 ರಲ್ಲಿ ರಚನೆಯಾದ ಸಂದರ್ಭದಲ್ಲಿ ರಾಜ್ಯ ದಸರಾ ಆಚರಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿತು
ಮತ್ತು ತಕ್ಕಂತೆ ಇದು Naada Habba ಅಥವಾ ರಾಜ್ಯ ಫೆಸ್ಟಿವಲ್ ಎಂದು ಕರೆಯಲಾಗುತ್ತದೆ.
Thursday, 18 October 2012
QUIS
1 .WH0 INVENTED
THE VACCINE FOR RABIES
2 WHICH COU NTRY 'S CRICKET CLUB GROUND IS KN OWN AS THE OVAL
3 WHICH WAS THE FIRST COUNTRY TO USE POSTAGE STAMPS
4 WHAT IS A FEMALE ASS CALLED?
5 IN WHICH COUNTRY IS THE ARABIAN DESERT
6 WHY DOES A SNAKE POKE ITS TOUNGE OUT?
7 ON THE LEAVES OF WHICH PLANT SILK WORM FEED?
8 WHAT DOES A PLUVIOMETER MEASURE
9 WHICH MAN FIRST TALKED ABOUT THE "POWER OF THE
PRESS"
10 INA BASKET BALL AT WHAT HEIGHT ARE THE BASKET PLACED
Wednesday, 17 October 2012
Subscribe to:
Posts (Atom)